ರೈತ ಪರ ಯೋಜನೆ ರದ್ದು ಮಾಡಿ ಕಾಂಗ್ರೆಸನಿಂದ ದ್ವೇಷ ರಾಜಕಾರಣ : ಮಾಜಿ ಶಾಸಕ ಕುಮಠಳ್ಳಿ

ಅಥಣಿ ;ಸೆ.9: ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಹಲವಾರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿತ್ತು ಆದರೆ ಈಗ ಆ ಯೋಜನೆಗಳನ್ನು ಕಾಂಗ್ರೇಸ್ ಸರಕಾರ ರದ್ದು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ , ಈ ತರಹ ದ್ವೇಷ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಅವರು ಅರಿಯಬೇಕು ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಅಥಣಿ ಬಿಜೆಪಿ ರೈತ ಮೋರ್ಚಾದಿಂದ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು ಅಥಣಿ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತ ಸಮುದಾಯ ತೊಂದರೆಗೊಳಪಟ್ಟಿದ್ದು ಸರಕಾರದ ಮೊದಲ ಲಿಸ್ಟನಲ್ಲಿಯೇ ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕು, ವಿದ್ಯುತ್ ಇಲಾಖೆಯ ಅನಿಯಮಿತ ವಿದ್ಯುತ ಸರಬರಾಜಿನಿಂದ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಬೆಳೆಗಳು ಕಮರಿಹೋಗುತ್ತಿವೆ ಅಲ್ಲದೇ ಎಲ್ಲರಿಗೂ ಉಚಿತ ವಿದ್ಯುತ ನೀಡಲಾಗುವುದು ಎಂದು ಭರವಸೆ ಕೊಟ್ಟಂತೆ ನಡೆಯದೆ ಮಾನದಂಡ ಅಳವಡಿಸುತ್ತಿರುವುದು ಸರಿಯಲ್ಲ, ನಾವು ನುಡಿದಂತೆ ನಡೆದ ಸರಕಾರ ಎಂದು ಜಂಬ ಕೊಚ್ಚಿ ಕೊಳ್ಳುತ್ತಿದ್ದರಲ್ಲ ಆದರೆ ನಾವು ಮುಂದೆ ಜನರಿಗೆ ಮೋಸ ಮಾಡಿದ ಸರಕಾರ ಅಂದು ಕೊಳ್ಳಬೇಕಾಗುತ್ತದೆ ಎಂದರು.
ಈ ಮೊದಲು ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಳೆಯಿಂದ ಭಾದಿತವಾದ ರಸ್ತೆ ನಿರ್ಮಾಣಕ್ಕಾಗಿ ಸುಮಾರು 10 ಕೋ.ರೂಗಳ ಅನುದಾನ ತಂದಿದ್ದೆ ಆದರೆ ಇಂದು ಸ್ಥಳೀಯ ಕಾಂಗ್ರೇಸ್ ಶಾಸಕರು ಅವುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವ ಸರಿಯಾದ ಕ್ರಮ ಅಲ್ಲ ಬೇಕಾದರೆ ಅವರು ಹೆಚ್ಚಿನ ಅನುದಾನ ತಂದು ರಸ್ತೆ, ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕು ಅವರದೆ ಸರಕಾರವಿದೆ ಎಂದರು.
ತಾಲೂಕಿನ ಪೂರ್ವಭಾಗದ ರೈತರ ಅನುಕಾಲಕ್ಕಾಗಿ ಅಮ್ಮಾಜೇಶ್ವರಿ ಯೋಜನೆ ಅದಷ್ಟು ಬೇಗ ಪ್ರಾರಂಭಿಸಬೇಕು ಇಲ್ಲವಾದಲ್ಲಿ ರೈತರೊಂದಿಗೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.

ಈ ವೇಳೆ ಮುಖಂಡರುಗಳಾದ ಸಿದ್ದಪ್ಪ ಮುದಕಣ್ಣವರ, ಧರೇಪ್ಪ ಠಕ್ಕಣ್ಣವರ ,ರೈತ ಶಿವಾನಂದ ಇಂಗಳಿ ಮಾತನಾಡಿದರು, ಮಂಡಳ ಅದ್ಯಕ್ಷ ರವಿ ಸಂಕ , ಮುಖಂಡರಾದ ರಮೇಶಗೌಡಾ ಪಾಟೀಲ ,ಗೀರಿಶ ಬುಟಾಳಿ ,ಪ್ರಭಾಕರ ಚವ್ಹಾಣ, ಪಿ ಪಿ ಮೋರೆ, ಮಲ್ಲಪ್ಪಾ ಹಂಚಿನಾಳ ,ಸಂತೋಷ ಕಕಮರಿ, ಶಿವಾನಂದ ಸಿಂಧೂರ, ರಾಜೇಂದ್ರ ಐಹೋಳೆ, ಶಿವಪ್ರಸನ್ನ ಹೀರೆಮಠ ,ಕುಮಾರ ಪಡಸಲಗಿ, ಮಲ್ಲಿಕಾರ್ಜನ ಅಂದಾನಿ ವಿನಯ ಪಾಟೀಲ, ಮಾರುತಿ ಮೊಹೀತೆ ಅಶೋಕಿ ಯಲ್ಲಡಗಿ ,ಚಂದ್ರಕಾಂತ ಕೆಂಚನ್ನವರ, ಅಣ್ಣಪ್ಪಾ ಬಜಂತ್ರಿ, ವಿಠ್ಠಲ ಮಾಚಕನೂರ, ಚಿದಾನಂದ ಪಾಟೀಲ ಸೇರಿದಂತೆ ಅನೇಕರು ಇದ್ದರು.