ರೈತ ಪರವಾದ ಯೋಜನೆಗಳು ಸದುಪಯೋಗವಾಗಲಿ- ಮುನೇನಕೊಪ್ಪ.


ನವಲಗುಂದ,ಎ.11: ರೈತರ ಪರವಾದ ಯೋಜನೆಗಳನ್ನು ಬಿಜೆಪಿ ಸರಕಾರ ಕೈಗೊಳ್ಳುತ್ತಿದೆ. ಅದರಲ್ಲಿ ಕಿಸಾನ್ ಸಮ್ಮಾನ ಯೋಜನೆ ಮಹತ್ವದ ಯೋಜನೆ ಸದುಪಯೋಗವಾಗಲಿ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಅವರು ಪಟ್ಟಣದ ಗವಿಮಠದಲ್ಲಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ವತಿಯಿಂದ ಆಯೋಜಿಸಲಾದ ಕಿಸಾನ್ ಸಮ್ಮಾನ ಸಮಾವೇಶ ಕಾರ್ಯಕದ್ರಮದಲ್ಲಿ ಮಾತನಾಡಿದರು.
ಕಿಸಾನ್ ಸಮ್ಮಾನ ರೈತನಿಗೆ ಆಸರೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಕುಟುಂಬಕ್ಕೆ ಅನುಕೂಲವಾಗಲು ಕಿಸಾನ್ ಸಮ್ಮಾನ ಯೋಜನೆಯಲ್ಲಿ ರೈತನ ಖಾತೆಗೆ ಜಮಾ ಮಾಡುವುದರ ಮೂಲಕ ಅನುಕೂಲ ಮಾಡಿರುತ್ತಾರೆ. ಇದರ ಲಾಭ ದೇಶದ್ಯಾಂತ ಎಲ್ಲ ರೈತರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ. ಕಿಸಾನ ಸಮ್ಮಾನ ನಿಧಿ ರೈತರಿಗೆ ತುಂಬಾ ಅನುಕೂಲವಾಗಿದ್ದು ಸಣ್ಣ ಹಿಡುವಳಿದಾರರಿಗೆ ವ್ಯವಸಾಯಕ್ಕೆ ಆಸರೆಯಾಗುತ್ತದೆ. ಇದು ನಿರಂತರವಾದ ಯೋಜನೆಯಾಗಿದ್ದರಿಂದ ರೈತ ಪರವಾದ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ ಎ.ಪಿ.ಎಮ್.ಸಿ ಕಾಯ್ದೆಯು ರೈತರಿಗೆ ಅನುಕೂಲವಾಗುತ್ತದೆ. ರೈತ ಹಿತವನ್ನು ಕಾಪಾಡಿಕೊಂಡು ಕಾಯ್ದೆಯನ್ನು ಮಾಡಿದ್ದು ವಿರೋಧ ಪಕ್ಷ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಶಲವಡಿ ಗ್ರಾಮ ಪಂಚಾಯತಿಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಲಾಯಿತು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಅರವಿಂದ ಯಕನಗೌಡ್ರ, ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ತಾಲೂಕ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ, ಚಂದ್ರಶೇಖರ ಅರಳಿ, ಬಸಣ್ಣ ಬೆಳವಣಕಿ, ಅಣ್ಣಪ್ಪ ಬಾಗಿ, ಬಸವರಾಜ ಯಳವತ್ತಿ, ಮಹಾಂತೇಶ ಕಾರಿಕಾಯಿ, ಅಡಿವೆಪ್ಪ ಶಿರಸಂಗಿ, ಮಂಜುನಾಥ ಇಮ್ಮಡಿ, ಬಿ.ಎಲ್.ಪೂಜಾರ, ಸಿದ್ದು ಪೂಜಾರ, ಐ.ಡಿ.ಇಬ್ರಾಹಿಂಪೂರ, ಸಂಕನಗೌಡರ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೋಂಡಿದ್ದರು.