ರೈತ ದೇಶದ ಬೆನ್ನೆಲುಬು :  ರಂಭಾಪುರಿ ಶ್ರೀ

ಬಾಳೆಹೊನ್ನೂರು.ಮಾ.೭; ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾಗುತ್ತದೆ. ಜನ ಸಮುದಾಯಕ್ಕೆ ಅನ್ನ ನೀಡುವ ನೇಗಿಲು ಯೋಗಿ ದೇಶದ ಬೆನ್ನೆಲುಬು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ನೇಗಿಲು ಯೋಗಿಯ ನೆನಹು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಔದ್ಯೋಗಿಕ ಕ್ಷೇತ್ರಕ್ಕಿರುವಷ್ಟು ಪ್ರೋತ್ಸಾಹ ರೈತ ಸಮುದಾಯಕ್ಕೆ ಇಲ್ಲ. ಕೆಲವು ಸಂದರ್ಭದಲ್ಲಿ ಅತಿವೃಷ್ಟಿಯಿಂದ ಇನ್ನು ಕೆಲವು ಸಂದರ್ಭದಲ್ಲಿ ಸಕಾಲಕ್ಕೆ ಮಳೆ ಬರದೇ ರೈತ ಸಂಕಷ್ಟ ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕದೇ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡುವ ಕೆಲಸ ಮಾಡಬೇಕಾದುದು ಬಹಳಷ್ಟು ಅವಶ್ಯಕತೆ ಇದೆ. ರೈತರ ಕಲ್ಯಾಣ ಕಾರ್ಯದಲ್ಲಿ ಯಾವುದೇ ರಾಜಕೀಯ ನುಸುಳದೇ ಪ್ರಾಮಾಣಿಕವಾಗಿ ರೈತ ಸಮುದಾಯವನ್ನು ಮೇಲೆತ್ತುವ ಮಹತ್ಕಾರ್ಯ ಮಾಡಬೇಕಾಗಿದೆ. ಆರೋಗ್ಯ ಪೂರ್ಣ ಸದೃಢ ದೇಶ ನಿರ್ಮಾಣಕ್ಕೆ ಅಸಿ, ಮಸಿ ಮತ್ತು ಕೃಷಿಯ ಅಗತ್ಯವಿದೆ. ಇವುಗಳ ಬಗೆಗೆ ನಿರ್ಲಕ್ಷö್ಯ ಮನೋಭಾವ ಸಲ್ಲದು. ಹೆಚ್ಚು ಹೆಚ್ಚು ನೀರಾವರಿ ಸೌಲಭ್ಯ ಒದಗಿಸುವ ಉತ್ತಮವಾದ ಬೀಜ, ರಸಗೊಬ್ಬರ, ಕಡಿಮೆ ಬಡ್ಡಿ ದರದಲ್ಲಿ ಸಾಲ, ಉತ್ತಮವಾದ ಬೆಲೆ ದೊರಕಿಸಿಕೊಡುವುದರ ಮೂಲಕ ರೈತರ ಹಿತ ಕಾಪಾಡಬೇಕಾಗಿದೆ. ಹಳ್ಳಿಗಳಲ್ಲಿ ಔದ್ಯೋಗಿಕ ಘಟಕಗಳನ್ನು ಹುಟ್ಟು ಹಾಕುವುದರಿಂದ ನಗರ ಪ್ರದೇಶದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಡಾ.ಗುರುದೇವ ಶಿವಾಚಾರ್ಯ ಜೀವನ ದರ್ಶನ’ ಕೃತಿಯನ್ನು ಲೋಕಾರ್ಪಣೆ ಮಾಡಿದ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುದೇವ ಶ್ರೀಗಳವರದು ದೂರದೃಷ್ಟಿ. ವೀರಶೈವ ಧರ್ಮ ಸಂಸ್ಕೃತಿ ಸಂವರ್ಧನೆಯಲ್ಲಿ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಆಯುರ್ವೇದ ಜ್ಞಾನ ಹೊಂದಿದ ಶ್ರೀಗಳವರು ಅನೇಕ ಬಡ ರೋಗಿಗಳ ಪಾಲಿಗೆ ದೇವರಾಗಿದ್ದರು. ಬಡವರ ನೊಂದ ಬೆಂದವರ ಪರವಾಗಿ ಸದಾ ಶ್ರಮಿಸಿದ ಶ್ರೇಯಸ್ಸು ಅವರದಾಗಿತ್ತೆಂದರು.ಜAಗಮ ವಾಹಿನಿ ನೂತನ ಪತ್ರಿಕೆಯನ್ನು ಅ.ಭಾ.ವೀ.ಮಹಾಸಭೆ ಜಿಲ್ಲಾಧ್ಯಕ್ಷ ಹೆಚ್.ಎಮ್.ಲೋಕೇಶ್ ಬಿಡುಗಡೆಗೊಳಿಸಿ ಮಾತನಾಡಿ ರೈತರ ಬಾಳು ಬಲು ಕಷ್ಟ. ಶ್ರಮದ ಬದುಕು ನೆಮ್ಮದಿಗೆ ಮೂಲ. ಸಂಪ್ರದಾಯಕವಾದ ಕೃಷಿಯಿಂದ ರೈತರ ಜೀವನ ಉಜ್ವಲಗೊಳ್ಳಲು ಸಾಧ್ಯವಿಲ್ಲ. ಆಧುನಿಕ ವ್ಯವಸ್ಥೆಯಲ್ಲಿ ರೈತರು ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯ ಮಾಡಬೇಕಾಗುತ್ತದೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕದಿದ್ದರೆ ದೇಶ ಬಿಕ್ಕುವುದು ಎಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಕಲ್ಯಾಣಕ್ಕಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿವೆ. ಅದರ ಸದುಪಯೋಗವನ್ನು ರೈತರು ಪಡೆಯಲು ಮುಂದಾಗಬೇಕೆAದರು.