ರೈತ ದೇಶದ ಬೆನ್ನಲುಬು-ಹಿರೇಮಠ

ಕಲಬುರಗಿ,ಡಿ.೨೬- ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತ ದೇಶದ ಬೆನ್ನೆಲುಬು ಆಗುವ ಮೂಲಕ ಪ್ರತಿಯೊಬ್ಬರ ಬದುಕಿನ ಜೀವನಾಡಿಯಾಗಿದ್ದಾನೆ ಎಂದು ಸಿದ್ಧಶ್ರಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜ ಸಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.
ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ “ರೈತರ
ದಿನಾಚರಣೆ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೈತರ ಬದುಕು ಸಂಕಷ್ಟದ ಸ್ಥಿತಿಯಲ್ಲಿದೆ.ಕನಿಷ್ಟ ಸುಖದ ಬದುಕು ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಭಾರತದ ಅಭಿವೃದ್ಧಿಯ ಮೂಲ ಕೃಷಿ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರಲ್ಲದೇ, ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆ ಜಾರಿಗೆ ತರಬೇಕೆಂದು ಹೇಳಿದರು.
ಶಿಕ್ಷಕಿ ಕವಿತಾ ಕಾವಳೆ ಅವರು ರೈತರನ್ನುದ್ದೇಶಿಸಿ ಮಾತನಾಡಿ, ರೈತರು ನಮ್ಮೆಲ್ಲರ ಜೀವನಾಡಿಯಾಗಿದ್ದು,
ಅವರು ಪಡುವ ಕಷ್ಟ ಹೇಳತೀರದು ಎಂದು ವಿವರಿಸುತ್ತಾ, ಅನ್ನದಾತನ ಕುರಿತು ಕವನ ವಾಚಿಸಿದರು. ಮಕ್ಕಳಿಂದ ಜೈ ಜವಾನ್ ಜೈ ಕಿಸಾನ್ ಘೋಣೆಗಳು ಮೋಳಗಿದವು.
ರೈತರ ದಿನಾಚರಣೆ ನಿಮಿತ್ಯ ಮಕ್ಕಳು ರೈತರಾಗಿ ಅವರ ತರಹ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುವುದರ ಜೊತೆಗೆ ನಾಟಕ ಹಾಗೂ ನೃತ್ಯ ಪ್ರದರ್ಶನ ಮಾಡಿ ಭೂಮಿ ತಾಯಿಗೆ ನಮನ ಸಲ್ಲಿಸುವ ದೃಶ್ಯ ನೋಡುಗರ
ಕಣ್ಮನ ಸೆಳೆಯಿತು.ಅನ್ನದಾತನ ಕುರಿತು ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದರು.
ಒಟ್ಟಾರೆ ಹಳ್ಳಿ ಸೂಗಡಿನ ಚಿತ್ರಣದ ಸಂಭ್ರಮ ರೈತರ ದಿನಾಚರಣೆಯಲ್ಲಿ ವಿಶೇಷವಾಗಿ ಕಂಡುಬಂತು.
ರಾಷ್ಟ್ರೀಯ ಗಣಿತ ದಿನಾಚರಣೆ:
ಭಾರತದ ಗಣಿತ ಶಾಸ್ತ್ರಜ್ಝ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಗಣಿತ
ದಿನಾಚರಣೆ ಆಚರಿಸಲಾಯಿತು. ಗಣಿತ ಶಿಕ್ಷಕಿ ಅಶ್ವಿನಿ ಅವರು ಗಣಿತ ದಿನಾಚರಣೆಯನ್ನುದ್ದೇಶಿಸಿ, ಗಣಿತ ಕಬ್ಬಿಣದ ಕಡಲೆಯಲ್ಲ,ಅದು ಚೆನ್ನಾಗಿ ಅರ್ಥೈಸಿಕೊಂಡರೆ ಸುಲಿದ ಬಾಳೆ ಹಣ್ಣಿನಷ್ಟೆ ಸರಳವಾಗಿದೆ. ನಮ್ಮ ನಿತ್ಯ ಜೀವನದಲ್ಲಿ ಲೆಕ್ಕಕಗಳ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಲೆಕ್ಕಗಳ ಕುರಿತು ವಿದ್ಯಾರ್ಥಿಗಳು ಅಭಿನಯದ ಮೂಲಕ ನಾಟಕ ಪ್ರದರ್ಶಿಸಿದರು.
ಸಂಭ್ರಮದ “ಕ್ರಿಸ್‌ಮಸ್” ಆಚರಣೆ:
ಇದೇ ಸಂದರ್ಭದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಭಾವೈಕ್ಯತೆಯ ಸಂಕೇತವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಮಕ್ಕಳು ಸಾಂತ ಕ್ಲೂಸ್ ಛದ್ಮವೇಷ ಧರಿಸಿ ಸುಂದರ ನೃತ್ಯದೊಂದಿಗೆ ಕ್ರಿಸ್‌ಮಸ್ ಆಚರಿಸಿ ಸಂಭ್ರಮಿಸಿದರು.
ಮೊದಲಿಗೆ ಮಕ್ಕಳಿಂದ ಪ್ರಾರ್ಥನಾ ಗೀತೆ ನಡೆಯಿತು.ಶಿಕ್ಷಕಿ ಸವಿತಾ ಅತಿಥಿಗಳಿಗೆ ಸ್ವಾಗತಿಸಿದರೆ, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ಶಿಕ್ಷಕಿ ವನಿತಾ ಶಿಂಧೆ ಅವರ ಂದನಾರ್ಪನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವೇದಿಕೆ ಮೇಲೆ ಶಾಲೆಯ ಮುಖ್ಯಗುರುಗಳಾದ ರುದ್ರಯ್ಯಾ ಮಠಪತಿ ಹಾಗೂ ಅಮೃತಾ ಪಿ.ಕೋರಳ್ಳಿ ಅವರು
ಉಸ್ಥಿತರಿದ್ದರು. ಕ್ಷಕಿಯರಾದ ಸವಿತಾ ದೇಸಾಯಿ, ಪೂರ್ಣಿಮಾ ಶೀರೂರ ಮಠ, ಮಂಗಲಾ, ಶ್ರೀದೇವಿ, ಸುಹಾಸಿನಿ, ಶಿಲ್ಪಾ ಪೂಜಾರಿ, ಕವಿತಾ ಮಾಲಿಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು.