ರೈತ ತಾಯಪ್ಪನಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಸುರಪುರ: ನ.9:ತಾಲ್ಲೂಕಿನ ವೆಂಕಟಾಪುರ ಗ್ರಾಮದ ರೈತ ತಾಯಪ್ಪನಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ವತಿಯಿಂದ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ ವೆಂಕಟಾಪೂರ ಗ್ರಾಮದ ರೈತ ತಾಯಪ್ಪನಿಗೆ ಸೇರಿದ ಸರ್ವೆ ನಂಬರ್ 33/1ರ ಎಂಟು ಎಕರೆ ಜಮೀನಿನಲ್ಲಿ ವಾಡಿ-ಗದಗ ರೈಲ್ವೆ ಕಾಮಗಾರಿಗೆ ಐದು ಎಕರೆ ಹತ್ತು ಗುಂಟೆ ಜಮೀನು ಗುರುತಿಸಿ ಕಲ್ಲು ಹಾಕಿ ಸ್ವಾಧೀನಪಡಿಸಿಕೊಂಡಿದ್ದರು, ಆದರೆ ಭೂ ಮಾಪಕರ ದಾಖಲಾತಿಯಲ್ಲಿ ಕೇವಲ ಒಂದು ಎಕರೆ ಮೂವತ್ತಾರು ಗುಂಟೆ ದಾಖಲಾತಿ ಮಾಡಿ ರೈತನಿಗೆ ಅನ್ಯಾಯ ಮಾಡಲಾಗಿದೆ, ಆದ್ದರಿಂದ ಏಂಟು ಎಕರೆ ಜಮೀನಿನ ದಾಖಲಾತಿ ತಯಾರಿಸಿ ಫಾರಂ ನಂಬರ್ ಟೇನ್ ಮಾಡಿಸಿ ರೈತನಿಗಾದ ಅನ್ಯಾವನ್ನು ಸರಿ ಪಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನ್ಯಾಯಕ್ಕೊಳಗಾದ ರೈತರೊಂದಿಗೆ ಸೇರಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಮಾನಪ್ಪ ಬಿಜಾಪೂರ, ಬುದ್ದಿವಂತ ನಾಗರಾಳ, ಬಾಗಪ್ಪ ದೇವಿಕೆರಾ, ದೇವಪ್ಪ, ಮರಿಲಿಂಗಪ್ಪ ರೈತ ತಾಯಪ್ಪನ ಕುಟುಂಬಸ್ಥರಿದ್ದರು.