ರೈತ ಜಾಗೃತಿ ಸಮಾವೇಶ | 2023-ನೇಗಿಲಯೋಗಿ ಪ್ರಶಸ್ತಿ ವಿತರಣೆ,ಬೃಹತ್ ರೈತ ಶೋಭಾ ಯಾತ್ರೆ

ವಿಜಯಪುರ :ಮಾ.3: ಜಿಲ್ಲೆಯ ಎಲ್ಲಾ ತಾಲೂಕಿನ ರೈತರ ಸಮಸ್ಯೆಗಳನ್ನು ಕ್ರೂಡಿಕರಿಸಿ ಕರಪತ್ರ ನಿರ್ಮಿಸಿ, ಸ್ವಾಮಿನಾಥನ ವರದಿ, ಫಸಲ ಭೀಮಾ ಯೋಜನೆ, ಸಾಲಮನ್ನಾ, ಜಿಲ್ಲೆಯ ಸಂಪೂರ್ಣ ನೀರಾವರಿ, ಬೆಂಬಲ ಬೆಲೆ, ಸಮರ್ಪಕ ವಿದ್ಯುತ್, ಹೊಲದ ರಸ್ತೆ ಸಮಸ್ಯೆ, ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ನಮ್ಮ ರೈತರ ಸಮಸ್ಯೆ ಬಗೆಹರೆಯಬೇಕು ಎನ್ನುವ ಸದುದೇಶದಿಂದ ಮಾರ್ಚ 28 ರಂದ ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ರೈತ ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.
ಬೃಹತ್ ರೈತ ಜಾಗೃತಿ ಸಮಾವೇಶ, ನೇಗಿಲಯೋಗಿ ಪ್ರಶಸ್ತಿ ವಿತರಣೆ, ಹಾಗೂ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ರೈತ ಶೋಭಾಯಾತ್ರೆ ನಿಮಿತ್ಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಛೇರಿಯಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡಿ ಜಿಲ್ಲೆಯ 13 ತಾಲೂಕುಗಳಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಸಂಘಟನೆಗೆ ಕರೆದುಕೊಂಡು ಬನ್ನಿ, ಜಿಲ್ಲೆಯ ಯಾವೊಬ್ಬ ರೈತನಿಗೂ ಅನ್ಯಾಯವಾದರು ಸಂಘಟನೆ ಸಹಿಸಿಕೊಳ್ಳುವುದಿಲ್ಲ, ನಾವೆಲ್ಲರೂ ಒಗ್ಗಟಾಗಿ ಹೋರಾಟ ಮಾಡಿ ಅಂತಹರವರಿಗೆ ಸೂಕ್ತ ಪರಿಹಾರ ಕೊಡಿಸೋಣ, ಮತ್ತು ಬರತಕ್ಕÀಂತಹ ರೈತ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಪ್ರಗತಿಪರ ಸಂಘಟನೆಯವರು ಭಾಗವಹಿಸಿರಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ವಿಜಯಲಕ್ಷ್ಮೀ ಗಾಯಕವಾಡ, ಈರಪ್ಪ ಕುಳೇಕುಮಟಗಿ, ಚಂದ್ರಕಾಂತ ಪ್ಯಾಟಿ, ಶಿವಾನಂದಯ್ಯ ಹಿರೇಮಠ, ಸೋಮು ಬಿರಾದಾರ, ಮಹಾದೇವ ಬನಸೋಡೆ, ಸಾತಲಿಂಗಯ್ಯ ಸಾಲಿಮಠ, ಸೋಮು ಪಟ್ಟಣಶೆಟ್ಟಿ, ವಿರೇಶ ಗೊಬ್ಬುರ, ಬಾಬುಗೌಡ ಬಿರಾದಾರ, ಕೆ.ಎಂ ಗುಡ್ನಾಳ, ನಜೀರ ನಂದರಗಿ, ಕಲ್ಲಪ್ಪ ಪಾರಶೆಟ್ಟಿ, ಪರಶುರಾಮ ಅಡಗಿಮನಿ, ಸಂಗು ಹುಣಶ್ಯಾಳ, ಸುಭಾಸ ಸಜ್ಜನ, ಮಡ್ಡಪ್ಪಾ ಗುಬ್ಬಾ, ಮಹಾದೇವ ತೇಲಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.