ರೈತ ಜಾಗೃತಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.25- ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ, ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ , ಹೈದರಾಬಾದಿನ ಎಟಿಜಿಸಿ ಬಯೋಟೆಕ್ ನ ಸಹಯೋಗದಲ್ಲಿ ರೈತ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಚಾಲನೆ ನೀಡಿದರು.
 ನಂತರ ಮಾತನಾಡಿದ ಅವರು ಸರ್ಕಾರವು ನೀಡುವ  ಪ್ರತಿಯೊಂದು ಕಾರ್ಯಕ್ರಮವು ಎಲ್ಲಾರಿಗೆ ಮುಟ್ಟಿಸಲು ಸಾಧ್ಯವಾಗುವುದಿಲ್ಲ ಕಾರಣ ಪ್ರತಿಯೊಬ್ಬ ರೈತರು ತಮ್ಮ ಕಾರ್ಯದಲ್ಲಿ ತಲ್ಲೀನರಾಗಿರುತ್ತಾರೆ, ಸಂಪನ್ಮೂಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಗತಿಪರ ರೈತರು ಇತರೆ ರೈತರಿಗೆ ಮಾಹಿತಿಯನ್ನು ಸಂಪೂರ್ಣವಾಗಿ ನೀಡುವ ಮೂಲಕ ಅವರಿಗೆ ರೋಗ ನಿರ್ವಹಣೆ ಕುರಿತು ತಿಳಿಯುತ್ತದೆ.
ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಪ್ರಗತಿಪರ ರೈತರು ಸಣ್ಣ ಸಣ್ಣ ರೈತರಿಗೆ ತಮ್ಮ ಅನುಭವದ ಸಲಹೆಗಳನ್ನು 1:10 ರಂತೆ ತಿಳಿಸಿದಾಗ ಪ್ರಗತಿ ಹೊಂದಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯ ನಿರ್ದೇಶಕ ನಜೀರ್ ಅಹಮದ್, ಎಟಿಜಿಸಿ ಕಂಪನಿಯ ಅಧಿಕಾರಿ ಚಿತ್ತರಂಜನ್ , ಎಟಿಜಿಸಿ ಸಂಪನ್ಮೂಲ ಅಧಿಕಾರಿ ಡಾಕ್ಟರ್ ಶ್ರೀನಿವಾಸ್, ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಇದ್ದರು.