ರೈತ ಚೈತನ್ಯ ಯಾತ್ರೆ ಆರಂಭ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.06: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ದತಿ ವಿರೋಧಿಸಿ  ರೈತ ಚೈತನ್ಯ ಯಾತ್ರೆಯನ್ನು ರಾಜ್ಯ ರೈತ ಸಂಘ  ಇಂದು ಆರಂಭಿಸಿದೆ.
ಬ್ಯಾಂಕ್ ನಿಂದ ಪಡೆದಿರುವ ಕೃಷಿ ಸಾಲಕ್ಕೆ ಅವೈಜ್ಞಾನಿಕವಾಗಿ ಬಡ್ಡಿ ಮತ್ತು ಇತರೇ ವೆಚ್ಚಗಳನ್ನು ವಿಧಿಸಿದೆ. ಅಲ್ಲದೆ ಇತರೇ ಬ್ಯಾಂಕುಗಳಂತೆ ಒಂದೇ ಬಾರಿಯ ಸಾಲ ತೀರುವಳಿಗೆ ಬ್ಯಾಂಕ್ ಮುಂದಾಗದಿರುವುದನ್ನು ವಿರೋಧಿಸಿ ಬ್ಯಾಂಕಿನ ಪ್ರಧಾನ ಕಚೇರಿ ಮುಂದೆ ಕಳೆದ ಡಿ.23 ರಿಂದ ಧರಣಿ ನಡೆದಿದೆ.
ಸಂಘದ ಅಧ್ಯಕ್ಷ ಕರೂರು ಮಾಧವರೆಡ್ಡಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದಿನ ಸತ್ಯಾಗ್ರಹ ಸ್ಥಳದಿಂದ ಯಾತ್ರೆಗೆ ಚಾಲನೆ ನೀಡಿದರು.
ಸಾಲ ಪಡೆದ ರೈತರ ಬಗ್ಗೆ ಬ್ಯಾಂಕ್ ಹೊಂದಿರುವ ಧೋರಣೆ  ಬಗ್ಗೆ ಬ್ಯಾಂಕಿನ ಕಾರ್ಯವ್ಯಾಪ್ತಿ ಹೊಂದಿರುವ ಜಿಲ್ಲೆಗಳಲ್ಲಿ ರೈತ ಚೈತನ್ಯ ಯಾತ್ರೆ ನಡೆಸಿ ಹೋರಾಟಕ್ಕೆ  ಜಾಗೃತಿ ಮೂಡಿಸಲಿದೆಂದರು.
ಯಾತ್ರೆಯ ಕೊಬೆಯಲ್ಲಿ
ಮಾ. 29 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಇಂದು ಸಂಜೆ ಚಿಕ್ಕಬಳ್ಳಾಪುರ, ನಂತರ ಯಾತ್ರೆಯು ಕೋಲಾರ, ದೊಡ್ಡ ಬಳ್ಳಾಪುರ, ತುಮಕೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಮಂಗಳೂರು, ಸೋಮವಾರಪೇಟೆ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, ಕೊಪ್ಪಳ, ಯಾದಗಿರಿ, ಕಲ್ಬುರ್ಗಿ, ಬೀದರ್, ಮಾ 27 ರಾಯಚೂರಿನಲ್ಲಿ ಯಾತ್ರೆ ನಡೆಯಲಿದೆ.