ರೈತ ಕಾರ್ಮಿಕ ವಿರೋಧಿ ಹೊಸ ಕಾನೂನು ಪ್ರತಿ ದಹನ- ಪ್ರತಿಭಟನೆ

ರಾಯಚೂರು.ಜ.೦೨-ನಿನ್ನೆ ರಂದು ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಲು ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲಿಸಿ ಸಿ.ಐ.ಟಿ.ಯು. ಕೇಂದ್ರ ಸಮಿತಿ ಕರೆಯ ಮೇರೆಗೆ ಇಂದು ಕಾರ್ಮಿಕರು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಯಚೂರುನಲ್ಲಿ ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕ, ಕೃಷಿ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಎ.ಪಿ.ಎಂ.ಸಿ. ಕಾಯ್ದೆ ಹೊಸ ಶಿಕ್ಷಣ ನೀತಿ ಕಾಯ್ದೆಯ ಪ್ರತಿಗಳನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಅಂಗನವಾಡಿ ನೌಕರರು, ಹಮಾಲಿ ಕಾರ್ಮಿಕರು, ಶಿಲ್ಪಾ ಮಡಿಕೇರ್ ಕಾರ್ಮಿಕರು, ರಾಯ್‌ಕೆಮ್, ಟ್ರೈಮ್ಯಾಕ್ಸ್, ಜಯಂತ್ ಮತ್ತು ವೈಟಿಪಿಎಸ್ ಕಾರ್ಮಿಕರು ಕಾರ್ಖಾನೆಯ ಗೇಟ್‌ಬಳಿ ಪ್ರತಿಭಟನೆ ನಡೆಸಿದರು.
ಹಮಾಲಿ ಕಾರ್ಮಿಕರು ಎ.ಪಿ.ಎಂ.ಸಿ. ಕಾರ್ಯಾಲಯದ ಮುಂದೆ ಅಂಗನವಾಡಿ ನೌಕರರು ಹರಿಜನವಾಡ, ಸಿಯತಲಾಬ್, ಜಹೀರಬಾದ್ ಅಲೋಪತಿಕ್ ಸರ್ಕಲ್, ಎಲ್‌ಬಿ.ಎಸ್. ನಗರ, ಅಮರಖೇಡ್ ಸರ್ಕಲ್, ಶಕ್ತಿನಗರ ಕಲ್ಮಲಾ, ಚಂದ್ರಬಂಡ, ಜೇಗರಕಲ್, ಗುಂಜಹಳ್ಳಿ ಉಡಮಗಲ್ ಖಾನಾಪೂರುಗಳಲ್ಲಿ ಕಾನೂನು ಪ್ರತಿಗಳನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ, ಡಿ.ಎಸ್.ಶರಣಬಸವ, ಉಪಾಧ್ಯಕ್ಷರಾದ ಹೆಚ್.ಪದ್ಮಾ ಪ್ರವೀಣ್‌ರೆಡ್ಡಿ ಗುಂಜಹಳ್ಳಿ, ಚೆನ್ನಾರೆಡ್ಡಿ ಭಾಸ್ಕರ್, ಸುರೇಶ್ ಪಾಟೀಲ್ ಈರಣ್ಣ ಸ್ವಾಮಿ ಲಕ್ಷ್ಮೀದೇವಮ್ಮ, ಗೋವಿಂದಾಸ್, ಗುರುರಾಜ, ಬಸವ ಪ್ರಕಾಶ್, ಸುರೇಶ, ಉಮೇಶ್, ರಾಮಿರೆಡ್ಡಿ, ಹೊನ್ನಪ್ಪ, ಸದ್ದಾಂ, ಪಾರ್ವತಿ, ಗೋಕುರಮ್ಮ, ಗಂಗಮ್ಮ, ಆದಿಲಕ್ಷ್ಮೀ, ಮಮತಾ, ರಾಧಮ್ಮ, ನಾಗಮ್ಮ, ನರ್ಮದಾ, ವೆಂಕಟಮ್ಮ, ರಹಿಮತ್, ಗೌರಮ್ಮ ಸೇರಿದಂತೆ ಅಂಗನವಾಡಿ ಬಿಸಿಯೂಟ ಹಮಾಲಿ ಕಾರ್ಖಾನೆಗಳ ಕಾರ್ಮಿಕರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಹೋರಾಟಕ್ಕೆ ಬೆಂಬಲಿಸಿ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ್ ಭಾಗವಹಿಸಿದ್ದರು.