ರೈತ ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ :ಅರ್ಜುನ ಗೊಬ್ಬುರಕರ್

ಕಲಬುರಗಿ:ನ.19:ದೇಶದ ಸಂಪತ್ತನ್ನು ರಕ್ಷಿಸಿ ಜನರ ಬದುಕನ್ನು ಉಳಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡಲೆಂದು ದಲಿತ ಮುಖಂಡರಾದ ಅರ್ಜುನ ಗೊಬ್ಬರಕರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಕಲ್ಬುರ್ಗಿ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ರಾಜಭವನ ಚಲೋ, ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತನಾಡುತ್ತ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಬಂಡವಾಳ ಶಾಹಿ ಪರ ಕಾನೂನು ತಿದ್ದುಪಡಿ ಮಾಡಿ ಜನಸಾಮಾನ್ಯರು ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಎ ಐ ಕೆ ಎಸ್ ರಾಜ್ಯ ಉಪಾಧ್ಯಕ್ಷರಾದ ಬಾಬು ಹೊನ್ನಾ ಮಾತನಾಡುತ್ತ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ಹಲವಾರು ಜನ ರೈತರು ಪ್ರಾಣ ಕಳೆದುಕೊಳ್ಳುವಂತೆ ದೆಹಲಿಯಲ್ಲಿ ನಡೆದಿರುವ ಹೋರಾಟ ವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬರುವ ದಿನಗಳಲ್ಲಿ ಎಲ್ಲಾ ರೈತ ಕಾರ್ಮಿಕ ಒಂದಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮೆಲ್ಲರ ಅಸ್ತಿತ್ವ ಉಳಿಯುತ್ತದೆ. ಕೇಂದ್ರ ಸರ್ಕಾರ ಕೋಮುವಾದ ಬೀಜ ಬಿತ್ತಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿದೆ. ಇಂತಹ ಸರ್ಕಾರ ಕೆಳಗೊಳಿಸುವುದೇ ನಮ್ಮೆಲ್ಲರ ಉದ್ದೇಶವಾಗಿರಬೇಕೆಂದು ಹೇಳಿದರು. ಇದೇ ತಿಂಗಳು 26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು. ಸಮಾವೇಶದಲ್ಲಿ
ಸಂಯುಕ್ತ – ಹೋರಾಟ ಕರ್ನಾಟಕ ಕಲಬುರಗಿ ಜಿಲ್ಲಾ ರೈತ -ಕಾರ್ಮಿಕ ಸಂಘಟನೆಯ ಮುಖಂಡರಾದ
ಮೌಲಾ ಮುಲ್ಲಾ,
ಎಸ್ ಆರ್ ಕೊಲ್ಲೂರ, ಎಂ ಬಿ ಸಜ್ಜನ, ನಾಗಯ್ಯಾ ಸ್ವಾಮಿ, ಭಿಮಶೇಟ್ಟಿ ಯಂಪಳ್ಳಿ, ನಾಗೆಂದ್ರಪ್ಪಾ ಥಂಬೆ,ಪದ್ಮಿನಿ ಕಿರಣಗಿ, ಶಾಂತಾ ಎನ್ ಘಂಟೆ, ಗೌರಮ್ಮ ಪಿ ಪಾಟೀಲ, ಶ್ರೀಮಂತ ಬಿರಾದಾರ, ಸೆಕಮ ಕುರಿ.ದಿಲೀಪ ನಾಗೂರೆ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಪದ್ಮಾಕರ್ ಜಾನಿಬ,ಶರಣಬಸಪ್ಪಾ ಮಮಶೆಟ್ಟಿ ಸೇರಿದಂತೆ ದಲಿತ, ರೈತ, ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.