ರೈತ ಕಾರ್ಮಿಕರ ಹಕ್ಕುಗಳ ಮಹಾಧರಣಿಗೆ ಚಲೋ

ದೇವದುರ್ಗ.ನ.೨೧- ನವೆಂಬರ್ ೨೬ ರಿಂದ ೨೮ ರ ವರೆಗೆ ಬೆಂಗಳೂರು ಪ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡ ಬಗರ್ ಹುಕುಂ ರೈತರ ಭೂಮಿಯ ಹಕ್ಕಿಗಾಗಿ ಮಹಾಧರಣಿಗೆ ರಾಯಚೂರು ಜಿಲ್ಲೆಯಿಂದ ಸುಮಾರು ಮೂರು ಸಾವಿರ ಜನ ತೆರಳಲಿದ್ದಾರೆ ಎಂದು ಮರೆಪ್ಪ ಹರವಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು. ಚುನಾವಣೆ ಪೂರ್ವದಲ್ಲಿ ದುಡಿಯುವ ವರ್ಗದ ಜನತೆಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಜನತೆಗೆ ನೀಡಿದ ಭರವಸೆಗಳನ್ನು ಮರೆತು ಆಡಳಿತ ನಡೆಸುವ ಸರ್ಕಾರಕ್ಕೆ ಎಚ್ಚರಿಸಲು ೭೨ ಗಂಟೆಗಳ ಕಾಲದ ಒಕ್ಕರಲಿನ ಹೋರಾಟಕ್ಕೆ ಕರೆ ನೀಡಲಾದ ಮಹಾಧರಣಿಯಲ್ಲಿ ಭಾಗವಹಿಸಳಿದ್ದೇವೆ ಎಂದರು.
ಅರಣ್ಯ ಕಂದಾಯ ಭೂಮಿಗಳ ಜಂಟಿ ಸರ್ವೆ ನಡೆಸಿ ಸರ್ವೇ ನಡೆಸಿ ನೀಡಬೇಕು. ಭೂಮಿಗಾಗಿ ಹೋರಾಟ ನಡೆಸಿದವರ ಮೇಲೆ ದಾಖಲಾದ ಕೇಸುಗಳನ್ನು ವಾಪಸ್ ಪಡೆಯಬೇಕು ಕಾರ್ಮಿಕರ ಕೆಲಸದ ಅವಧಿಯನ್ನು ಎಂಟು ಗಂಟೆಗಳ ಕಾಲ ಗೊಳಿಸುವಂತೆ ತಿದ್ದುಪಡಿಗಳನ್ನು ರದ್ದು ಪಡಿಸಬೇಕು ಜನ ವಿರೋಧಿ ರೈತ ಕಾರ್ಮಿಕ ವಿರೋಧಿಗಳ ಕಾಯ್ದೆ ಕಾನೂನುಗಳನ್ನು ಜಾರಿಗೆ ತರದಂತೆ ಅಂದಿನ ಧರಣಿಯಲ್ಲಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ವೆಂಕಟೇಶ್. ಮಹಮ್ಮದ್ ಸೇರಿದಂತೆ ಇತರರು ಇದ್ದರು.