ರೈತ ಆತ್ಮಹತ್ಯೆ

ಅಣ್ಣಿಗೇರಿ,ಅ 2 : ಬೆಳೆ ಹಾನಿಯಿಂದ ನೊಂದ ರೈತ ತನ್ನ ಮನೆ ಮುಂಭಾಗದ ಶೆಡ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಜಾಡಗೇರಿ ಓಣಿಯಲ್ಲಿ ಸಂಭವಿಸಿದೆ.
ವಿರುಪಾಕ್ಷಪ್ಪ ಭೀಮಪ್ಪ ಹೆಬ್ಬಳ್ಳಿ(62) ಮೃತ ರೈತ. ಅಣ್ಣಿಗೆರಿಯ ಬ್ಯಾಂಕ್ ಆಫ್ ಬರೋಡಾ ದಲ್ಲಿ 2.50.000 ರೂ. ಸಾಲ ಮಾಡಿದ್ದು, ಅಣ್ಣಿಗೇರಿಯಲ್ಲಿ ಕೈ ಸಾಲ ಮಾಡಿಕೊಂಡಿರುತ್ತಾನೆ. ಅದರಿಂದ ಮನನೊಂದು ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಅಣ್ಣಿಗೇರಿ ಆರಕ್ಷಕ ಠಾಣೆ ಅಧಿಕಾರಿ ಎಲ್.ಜಿ. ಆಲದಕಟ್ಟಿ, ಯು.ಸಿ. ಪಾಟೀಲ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.