ರೈತ ಆತ್ಮಹತ್ಯೆ: ನಿಖಿಲ್ ಕುಮಾರಸ್ವಾಮಿರಿಂದ 1ಲಕ್ಷರೂಗಳ ಪರಿಹಾರ ವಿತರಣೆ

ಕೆ.ಆರ್.ಪೇಟೆ:ನ.09. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ರೈತ ನಂಜೇಗೌಡ ಅವರ ಕುಟುಂಬಕ್ಕೆ ರಾಜ್ಯ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು 1ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತ ನಂಜೇಗೌಡರ ಮನೆಗೆ ಭೇಟಿ ನೀಡುವ ಮುನ್ನ ಕಿಕ್ಕೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು.
ನಂತರ ಕಿಕ್ಕೇರಿ ಹೋಬಳಿ ಚೌಡೇನಹಳ್ಳಿ ಗ್ರಾಮದ ಮೃತ ನಂಜೇಗೌಡರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡಿ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ತಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಎಲ್ಲಾ ರೈತರ ಸಾಲ ಮನ್ನಾ ಮಾಡಿ. ಆತ್ಮಹತ್ಯೆ ತಪ್ಪಿಸಬೇಕೆಂದು ಪ್ರಯತ್ನಪಟ್ಟು ಸಾಲ ಮನ್ನಾ ಮಾಡಿದ್ದರು ಆದರೂ ಸಹ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುವುದು ನೋಡಿ ಮುಂದೆ ನಮ್ಮ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದೇ ಬರುತ್ತದೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಅಷ್ಟೆ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ ಮುಂದೆ ರೈತರು ಸಾಲ ಮಾಡದೇ ಇರುವಂತಹ ಯೋಜನೆಗಳನ್ನು ರೈತರಿಗೆ ಮಾಡುವ ಗುರಿ ಹೊಂದಿದ್ದೇವೆ. ಜೆಡಿಎಸ್ ಸರ್ಕಾರ ರಚನೆಯಾದ ಕೂಡಲೇ ಹಲವು ರೈತರ ಯೋಜನೆಗಳನ್ನು ಕೊಡುವ ಗುರಿ ಹೊಂದಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಜಿಲ್ಲಾ ಪಂಚಾಯತ್ ಸದಸ್ಯರಾದ ಚೋಳೇನಹಳ್ಳಿ ಪುಟ್ಟ ಸ್ವಾಮಿಗೌಡ, ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜ್, ಎಪಿಎಂಸಿ ಅಧ್ಯಕ್ಷ ಚಂದ್ರಹಾಸ, ಮಾಜಿ ಅಧ್ಯಕ್ಷ ಐನೋರ ಹಳ್ಳಿ ಮಲ್ಲೇಶ್,ಸೇರಿದಂತೆ ಜೆಡಿಎಸ್ ಮುಖಂಡರು,ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.