ರೈತಾಂದೋಲನ ಬೆಂಬಲಿಸಿ ಹಳ್ಳಿಯಾನಕ್ಕೆ ಚಾಲನೆ

ರಾಯಚೂರು, ನ.೧೭- ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತಾಂದೋಲನ ಬೆಂಬಲಿಸಿ ರೈತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಡಾ.ಬಿ. ಆರ್.ಅಂಬೇಡ್ಕರ್ ವೃತ್ತದಲ್ಲಿ ಹಳ್ಳಿಯಾನಕ್ಕೆ ಚಾಲನೆ ನೀಡಿದರು.
ನಂತರ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ,ರೈತ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಒಂದು ವರ್ಷದಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಹರಿಯಾಣ, ಗುಜರಾತ್,ರಾಜಸ್ಥಾನ ವಿಭಾಗದಿಂದ ಹಳ್ಳಿಯ ರೈತರು ಹೋರಾಟಕ್ಕೆ ಹೋಗ್ತಾ ಇದ್ದಾರೆ.ನಮ್ಮ ಭಾಗದಲ್ಲಿ ಹಳ್ಳಿಯಿಂದ ರೈತರು ಯಾರು ಆಸಕ್ತಿ ಬರುತ್ತಿಲ್ಲ. ಆದ್ದರಿಂದ ಹಳ್ಳಿ ಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ರೈತರು ಹಳ್ಳಿಯಿಂದ ಎದ್ದು ಬಂದಾಗ ಈ ದೆಹಲಿ ಹೋರಾಟಕ್ಕೆ ನಾವು ಬೆಂಬಲ ಸೂಚಿಸಿದಂತೆ ಆಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ರೈತರಿಗೆ ನ್ಯಾಯ ಸಿಗುವ ಹಾಗೆ ಮಾಡಬೇಕು. ನರೇಂದ್ರ ಮೋದಿ ಯವರು ಸರ್ವಾಧಿಕಾರಿ ವಿವರಣೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ಮೋದಿಗೆ ತಕ್ಕ ಪಾಠ ಕಲಿಸಬೇಕು ಮತ್ತು ರೈತರ ಮೂರು ಕಾಯ್ದೆಗಳ ಬಗ್ಗೆ ಹಳ್ಳಿಯಲ್ಲಿರುವ ಅಂತ ಪ್ರತಿಯೊಬ್ಬ ರೈತರಿಗೆ ಮನವರಿಕೆ ಮಾಡಬೇಕು ಎಂದರು.
ನಂತರ ಕಲ್ಯಾಣ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಜಿಂದಪ್ಪ ಮಾತನಾಡಿ,ದೆಹಲಿ ರೈತರ ಹೋರಾಟ ಒಂದು ವರ್ಷ ಕಳೆಯುತಿದ್ದರು ದಪ್ಪ ಚರ್ಮದ ನರೇಂದ್ರ ಮೋದಿಯವರಿಗೆ ರೈತರ ಕೂಗು ಕೇಳುತ್ತಿಲ್ಲವಾಗಿದೆ,ದೆಹಲಿ,ಹರಿಯಾಣ,ಪಂಜಾಬ್, ರೈತರು ಯಾವ ರೀತಿಯಾಗಿ ಐತಿಹಾಸಿಕವಾಗಿ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೋ ಅದೇ ರೀತಿಯಾಗಿ ನಮ್ಮ ಭಾಗದ ರೈತರು ಪ್ರತಿ ಹಳ್ಳಿಯಿಂದ ಈ ಹೋರಾಟಕ್ಕೆ ಬೆಂಬಲವನ್ನು ಸೂಚಿಸಬೇಕಿದೆ,ಮೋದಿ ಸರ್ವಾಧಿಕಾರಿ ಧೋರಣೆಯು ದೇಶದ ರೈತಾಪಿ ವರ್ಗಕ್ಕೆ ಮಾರಕವಾಗಿ,ರೈತರಿಗೆ ಈ ಮೂರು ಕಾಯ್ದೆಗಳಿಂದ ಯಾವರೀತಿಯ ಅಪಾಯಕಾರಿ ಎಂಬುದನ್ನು ತಿಳಿಯಪಡಿಸಬೇಕಿದೆ
ಎಂದರು.
ಈ ಸಂದರ್ಭದಲ್ಲಿ ಮಾರೆಪ್ಪ ಹರಿವಿ,ಎಂ.ಆರ್.ಬೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.