ರೈತಸಂಘ ಹಸಿರುಸೇನೆ ನೇತೃತ್ವದಲ್ಲಿ ಕಛೇರಿ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ


ಹಿರಿಯೂರು.ನ.೮: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತ ಜಾಗೃತಿ ಸಮಾವೇಶದ ಆಂಗವಾಗಿ ನವಂಬರ್ ೯ರ ಸೋಮವಾರದಂದು ಬೆಳಗ್ಗೆ ೧೧ ಗಂಟೆಗೆ ರಂಜಿತ್ ಹೋಟೆಲ್ ನಿಂದ ಗಾಂಧಿ ವೃತ್ತದವರೆಗೆ ಬೈಕ್ ಜಾಥಾ ಹಾಗೂ ೧೧.೩೦ಕ್ಕೆ ಗಾಂಧಿವೃತ್ತದ ಬಳಿ ರೈತ ಸಂಘದ ಕಛೇರಿ ಉದ್ಘಾಟನೆ ಹಾಗೂ ಮದ್ಯಾಹ್ನ ೧೨ ಗಂಟೆಗೆ ಎಪಿಎಂಸಿ ಆವರಣದಲ್ಲಿ ರೈತ ಜಾಗೃತಿ ಸಮಾವೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸುವರು. ರಾಜ್ಯ ಕಾರ್ಯಾಧ್ಯಕ್ಷರಾದ ಈಚಘಟ್ಟ ಸಿದ್ಧವೀರಪ್ಪ, ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾಧ್ಯಕ್ಷರಾದ ಚಿಕ್ಕಕಟ್ಟಿಗೆರೆ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಾಕಿ ಕಾಮಗಾರಿ, ರೈತ ವಿರೋಧಿ ಕರ್ನಾಟಕ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ರೈತ ವಿರೋಧಿ ಹಾಗೂ ಜನವಿರೋಧಿ ವಿದ್ಯುತ್ ಖಾಸಗೀಕರಣ ಸೇರಿದಂತೆ ವಿವಿಧ ವಿ?ಯಗಳ ಬಗ್ಗೆ ಚರ್ಚೆ ನಡೆಸಲಾಗುವುದು, ಎಂದರಲ್ಲದೆ. ತಾಲ್ಲೂಕಿನ ರೈತ ಹೋರಾಟಗಾರರು, ಮಹಿಳೆಯರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಹಾಗೂ ಇತರೆ ಜನಪರ ಸಂಘಟನೆಗಳು ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
-ರೈತ ಸಂಘ ೮.೧೧ ಫೋಟೊ ಇದೆ.