ರೈತರ ಹೋಲದ ಖ್ಯಾದ ಬೋಳ ಗಡಗಿ

ಔರಾಧ:ಜ.9:ದೇಶದಲ್ಲಿ ನಗರಗಳು, ಪಟ್ಟಣ ಸೇರಿದಂತೆ ಪಂಚತಾರಾ ಹೋಟೆಲಗಳಲ್ಲಿ ದೇಶ ವಿದೇಶಗಳ ಉತ್ತಮ ಖ್ಯಾದ ಮಾಡುವುದನ್ನು ನೋಡಿದ್ದೇವೆ.

ನಮ್ಮ ಉತ್ತರ ಕರ್ನಾಟಕದ ರೈತರು ತಮ್ಮ ಹೋಲದಲ್ಲಿ ಮಾಡುವ ಖ್ಯಾದ ಪಂಚತಾರಾ ಹೋಟೆಲಗಳ ರುಚಿಯನ್ನು ಮಿರುಸುತ್ತದೆ ಅದೇ ಈ ಬೋಳ ಗಡಗಿ.

ಹೌದು ನಮ್ಮ ಭಾಗದ ರೈತರೆಲ್ಲರು ತಮ್ಮ ತಮ್ಮ ಹೋಲಗಳಲ್ಲಿಯೇ ಉತ್ತಮ ದೇಸಿ ಆಹಾರವನ್ನು ತಾವೇ ಸ್ವತಃ ಮಾಡಿಕೊಂಡು ತಿನ್ನುತ್ತಾರೆ, ಇದು ಬಾಯಿಯ ರುಚಿಯ ಜೋತೆಯಲ್ಲಿ ಆರೋಗ್ಯಕ್ಕು ಒಳ್ಳೆಯದಾಗಿದೆ.

ಹೋಲದಲ್ಲಿ ಸಿಗುವ ಅವರೆಕಾಯಿ ಮತ್ತು ತೋಗರೆಕಾಯಿ ಎರಡನ್ನು ಒಂದು ಗಡಗಿಯಲ್ಲಿ ಹಾಕುವ ಮೂಲಕ ಅದರಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಗಡಿಗೆಯ ಬಾಯಿಗೆ ಸ್ವಲ್ಪ ಮುತ್ತಿನ ಎಲೆಗಳು ಕಾಯಿಗಳು ಹೋರಗಡೆ ಬಿಳದಂತೆ ಹಚ್ಚಿ ಗಡಗಿಯನ್ನು ಗಡಗಿಯನ್ನು ಬೋಳ ತಲೆ ಕೆಳಗೆ ಮಾಡಿ ಸುತ್ತಲೂ ಮೇಲೆ ಉರಿಯ ಬೆಂಕಿಯನ್ನು ಕಾಯಿಸಲು ಹಾಕಿದರೆ ಒಂದು ಅರ್ದ ತಾಸಿನಲ್ಲಿ ಬೋಳ ಗಡಗಿ ತನ್ನ ಸುವಾಸನೆಯನ್ನು ಘಮ ಘಮಘಮಿಸುವ ಮೋಲಕ ತಯ್ಯಾರ ಆಗಿದೆ ಎಂದು ತಿಳಿಸುತ್ತದೆ.

ಬೋಳ ಗಡಗಿ ಬಹಳ ರುಚಿಕರವಾಗುವ ಮೋಲಕ ಹೋಲದಲ್ಲಿ ಮಾಡಿಕೊಂಡು ಕುಟುಂಬದ ಸದಸ್ಯರು ಸೇರಿದಂತೆ ಸ್ನೇಹಿತರೆಲ್ಲರು ತಿನ್ನುತ್ತವೆ ಎನ್ನುತ್ತಾರೆ ಯುವ ರೈತ ಅಮೀರ್ ಮುಲ್ಲಾ.

ಏನೇ ಆಗಲಿ ಈ ಬೋಳ ಗಡಗಿ ಯಾವುದೇ ರಾಸಾಯನಿಕ ಪದಾರ್ಥ ಹಾಕದೆ ದೇಸಿಯವಾಗಿ ಸಿಗುವಂತಹ ರೈತರ ಖ್ಯಾದ ವಾಗಿದೆ.