ರೈತರ ಹೋರಾಟ ಬೆಂಬಲಿಸಿ ಸಿಐಟಿಯು ಪ್ರತಿಭಟನೆ

ರಾಯಚೂರು,ಜ.೮- ದೆಹಲಿಯಲ್ಲಿ ಹೋರಾಟ ನಿರತ ರೈತರ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಸಿಐಟಿಯು ಸಮಿತಿಯು ಇಂದು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಾಗು ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹವು ನಡೆಸುತ್ತಿರುವ ಹೋರಾಟ ತೀವ್ರವಾಗುತ್ತಿದೆ. ಅದರೆ ಕೇಂದ್ರ ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲವೆಂದು ಸಿಐಟಿಯು ಖಂಡಿಸಿದೆ.
ಬಂಡವಾಳಗಾರರ ಪರವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳಿಗಾಗಿ ಒತ್ತಾಯಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರೆಸಿದೆ . ಇದುವರೆಗೆ ೭ ಬಾರಿ ಮಾತುಕತೆಗಳನ್ನು ರೈತ ಸಂಘಟನೆಗಳ ಜೊತೆ ನಡೆಸಿದ್ದರೂ ಅದು ಮೂರು ಕೃಷಿ ಮಸೂದೆಗಳನ್ನು ಮಾತ್ರ ವಾಪಸ್ ಪಡೆಯಲು ಸಿದ್ಧವಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ ಮೋದಿ ಸರ್ಕಾರ ರೈತರ ಬೆಳೆದ ಬೆಳೆಗೆ ಖಾತ್ರಿಯಾದ ಬೆಂಬಲ ಬೆಲೆ ನೀಡಲು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ತನ್ನ ಧೋರಣೆಯಿಂದಾಗಿ ಗೊಸುಂಬೆತನವನ್ನು ತೋರಿಸುತ್ತಿದೆ. ಇದನ್ನು ಸಿಐಟಿಯು ಜಿಲ್ಲಾ ಸಮಿತಿ ಖಂಡಿಸುತ್ತದೆ. ಕೊಡಲೆ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದೆ.
ಆದಾಯ ತೆರಿಗೆ ಮಿತಿಯಿಂದ ಹೊರಗಿರುವ ಎಲ್ಲರ ಖಾತೆಗೆ ೭೫೦೦ ರೂ.ಗಳನ್ನು ವರ್ಗಾಯಿಸಬೇಕು. ಪ್ರತಿಯೊಬ್ಬರಿಗೆ ೧೦ ಕೆಜಿ ಆಹಾರಧಾನ್ಯ ಉಚಿತವಾಗಿ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ೨೦೦ ದಿನಗಳಿಗೆ ಏರಿಸಬೇಕು ಮತ್ತು ದಿನಕ್ಕೆ ೭೦೦ ರೂ.ಗಳ ಕೂಲಿ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಶರಣವಸವ, ಹೆಚ್.ಪದ್ಮಾ, ಪ್ರವೀಣ ಕುಮಾರ, ಗೋವಿಂದಮ್ಮ ಮಧು, ಅಮರೇಶ ಸಜ್ಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.