ರೈತರ ಹೋರಾಟಕ್ಕೆ ಸಂದ ಜಯ


ನವಲಗುಂದ,ಡಿ.31: ಮಹಾದಾಯಿ ಯೋಜನೆಗಾಗಿ ಪಕ್ಷಾತೀತವಾಗಿ ರೈತರು, ವ್ಯಾಪಾರಸ್ಥರು, ಪತ್ರಕರ್ತರು ಎಲ್ಲ ರಾಜಕೀಯ ಪಕ್ಷದವರು ಬೆಂಬಲವನ್ನು ಸೂಚಿಸಿ ಹೋರಾಟಕ್ಕೆ ಸಾಥ ನೀಡಿದ ಫಲದಿಂದ ಬಿಜೆಪಿ ಸರಕಾರ ತಡವಾದರೂ ಮಹಾದಾಯಿ ಅಧಿಸೂಚನೆ ಹೊರಡಿಸಿರುವುದು ತುಂಬಾ ಸಂತೋಷ ಈ ಭಾಗದ ಜಲ್ವಂತ ಸಮಸ್ಯೆ ಮಹಾದಾಯಿ ಕಳಸಾ ಬಂಡೂರಿ ಹೋರಾಟಕ್ಕೆ ಜಯಸಿಕ್ಕಾಂತಾಗಿದೆ ಎಂದು ಪಕ್ಷಾತೀತ ಅಸಂಘಟಿತ ಕಾರ್ಮಿಕ, ರೈತ ಹೋರಾಟದ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.
ಅವರು ಮಹಾದಾಯಿ ಯೋಜನೆಗೆ ಡಿ.ಪಿ.ಆರ್ ಅನುಮೋದನೆ ದೊರಕಿರುವ ಹಿನ್ನೇಲೆ ರೈತರೊಂದಿಗೆ ಪಟ್ಟಣದ ರೈತಭವನದ ಬಳಿ ಇರುವಂತಹ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ಭಾಗದ ಸಚಿವರು ಡಿ.ಪಿ.ಆರ್ ಅನುಮೋದನೆಯ ನಂತರ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವೇ ದಿನಗಳಲ್ಲಿ ಈ ಭಾಗಕ್ಕೆ ನೀರು ಹರಿಯುವಂತೆ ಮಾಡಬೇಕು ಅಷ್ಟೇ ಅಲ್ಲದೇ ಇನ್ನು ಮಹಾದಾಯಿ ಕಳಸಾ ಬಂಡೂರಿಗಾಗಿ ಹೋರಾಟದ ಸಂದರ್ಭದಲ್ಲಿ ಉಳಿದುಕೊಂಡಿರುವಂತಹ ರೈತರ ಮೇಲಿನ ಕೇಸುಗಳನ್ನು ವಜಾ ಮಾಡಬೇಕೆಂದು ಮನವಿ ಮಾಡಿದರು.
ಡಿ.ಪಿ.ಆರ್ ಅನುಮೋದನೆ ಸುದ್ದಿ ಬರುತ್ತಿದ್ದಂತೆ ರೈತ ಹೋರಾಟಗಾರರು, ರೈತರು ರೈತ ಭವ
ರೈತ ಮುಖಂಡರಾದ ಡಿ.ಎಮ್.ಶಲವಡಿ, ನೇತಾಜಿ ಕಲಾಲ, ಅರ್ಜುನಪ್ಪ ಮೂಲಮನಿ, ಶಿದ್ದಪ್ಪ ಕಂಬಳಿ, ಯಲ್ಲಪ್ಪ ಡಾಲಿನ, ಭಮರಪ್ಪ ಕಾತರಕಿ, ಮಲ್ಲಯ್ಯ ಪೂಜಾರ, ನಾಗಪ್ಪ ಹಂಪಿಹೂಳಿ, ರಘುನಾಥ ನಡುವಿನಮನಿ, ಡಿ.ಜಿ.ಹೆಬಸೂರ, ಶಿವಾನಂದ ಕೊಳಲಿನ ಆನಂದ ಹೆಬಸೂರ, ಶೇಖಪ್ಪ ನಾಯ್ಕರ, ಸಿದ್ದಪ್ಪ ಜೆಟ್ಟಣ್ಣವರ, ಮೈಲಾರಪ್ಪ ವೈದ್ಯೆ. ವೀರನಗೌಡ ಮುದಿಗೌಡರ, ಯಲ್ಲಪ್ಪ ದೊಡಿಕಲ್ಲ ಇತರರು ಇದ್ದರು.