ಸಂಜೆವಾಣಿ ನ್ಯೂಸ್
ಮೈಸೂರು: ಸೆ.21:- ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ನಟರು ಮೌನ ವಿಚಾರಕ್ಕೆ ನಟ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ನೆಲ ಜಲ ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ನಮ್ಮ ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿ ರೈತರ ಜೊತೆ ನಿಲ್ಲುತ್ತೇವೆ.ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಟ ರಾಘವೇಂದ್ರ ರಾಜಕುಮಾರ್.ಇದು ಸರ್ಕಾರಕ್ಕೆ ಬಿಟ್ಟ ವಿಚಾರ.ಸರ್ಕಾರ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದೆ. ಜನರು ಎಲೆಲ್ಲಿ ಕರೆತ್ತಾರೋ ಅಲ್ಲಿಗೆ ನಾವು ಹೋಗಾಬೇಕಾಗುತ್ತೆ ಎಂದರು.
ನಾವು ಬರಿ ಸಿನಿಮಾ ತೋರಿಸ್ಲಿಕೆ ಅಲ್ಲ. ನೆಲ, ಜಲ, ಭಾಷಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಆ ದಿನಗಳ ಹತ್ತಿರ ಬಂದಾಗ ಕರೆ ಬರುತ್ತೆ.ಫಿಲ್ಮ್ ಚೇಂಬರ್ ನಿಂದ ಕರೆ ಬರುತ್ತೆ ಅವಾಗ ನಾವು ಹೋರಾಟಕ್ಕೆ ದುಮ್ಮುಕ್ಕುತ್ತೇವೆ.
ಒಬ್ಬ ಒಬ್ಬರೇ ಬಂದರೆ ಹೆಸರು ಮಾಡಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಅಂತಾರೇ.ಫಿಲ್ಮ ಚೇಂಬರ್ ನಿಂದ ಬರುವ ಕರೆಗೆ ನಾವು ಕಾಯುತ್ತಿದ್ದೇವೆ.ಅಲ್ಲಿ ಹೋರಾಟದ ರೂಪುರೇಷೆ ಸಿದ್ಧ ಪಡಿಸುತ್ತೇವೆ.ಆ ದಿನಕ್ಕೆ ಕಾಯುತ್ತಿದ್ದೇವೆ.
ರೈತರ ಹೋರಾಟಕ್ಕೆ ಕರೆದರೆ ಹೋಗುವುದಲ್ಲ ಹೋಗಲೇ ಬೇಕು ಎಂದರು.
ಇದು ನಮ್ಮ ಧರ್ಮ. ರಾಜಕುಮಾರ್ ಅವರೇ ಬೇರೆ. ಅವರು ಒಬ್ಬರು ನಿಂತರೇ ಇಡೀ ಇಂಡಸ್ಟ್ರಿ ಅವರ ಪರವಾಗಿ ನಿಲ್ಲುತ್ತಿತ್ತು.ಆ ಜಾಗ ತುಂಬಿಸಲು ಸಾಧ್ಯವಿಲ್ಲ.
ಫಿಲ್ಮ್ ಅಸೋಸಿಯೇಷನ್ ನಿಂದ ಇನ್ನೂ ಯಾವುದೇ ಕರೆ ಬಂದಿಲ್ಲ. ರೈತರು ಹೋರಾಟಕ್ಕೆ ನಮ್ಮ ಕರೆದಿಲ್ಲ. ಕರೆದ ತಕ್ಷಣ ನಾವು ಬರುತ್ತೇವೆ. ನಿಯಮದ ಪ್ರಕಾರವೇ ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ. ಒಬ್ಬೊಬ್ಬರೆ ಹೋರಾಟದಲ್ಲಿ ಭಾಗಿಯಾಗಬಾರದು.
ಎಲ್ಲ ರಾಜಕುಮಾರ್ ಆಗಲು ಸಾಧ್ಯವಿಲ್ಲ. ರಾಜಕುಮಾರ್ ಸ್ಥಾನ ತುಂಬಲು ಯಾರಿಂದಲೂ ಸಾಧ್ತವಿಲ್ಲ. ಆ ಶಕ್ತಿ ಯಾರಲ್ಲಿ ಇದೇ ನೀವೇ ಹೇಳಿ. ಎಲ್ಲಾ ಸೇರಿದರೆ ಮಾತ್ರ ರಾಜಕುಮಾರ್ ಆಗಲು ಸಾಧ್ಯ ಎಂದರು
ಕಾವೇರಿ ವಿಚಾರದಲ್ಲಿ ನಮಗೆ ಕೋಪ ಬರತ್ತೆ:
ಕಾವೇರಿ ಹೋರಾಟಕ್ಕೆ ಚಿತ್ರ ರಂಗದ ನಟರು ಭಾಗಿಯಾಗದ ವಿಚಾರಕ್ಕೆ ಮೈಸೂರಿನಲ್ಲಿ ನಟ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ನೀಡಿದರು.
ಏಕಾ ಏಕಿ ನಾವು ಹೋರಾಟಕ್ಕೆ ದುಮುಕಲು ಸಾಧ್ಯವಿಲ್ಲ. ಪ್ರಚಾರಕ್ಕೋಸ್ಕರ ಹೋರಾಟಕ್ಕೆ ದುಮುಕಿದ್ದಾರೆ ಎನ್ನುತ್ತಾರೆ. ನಾವು ಚಿಕ್ಕವರು ಇತ್ತೀಚಿಗಷ್ಟೇ ಬಂದವರು.
ನಾವು ಹೋರಾಟ ಮಾಡಿದ್ರೆ ಯಾರೋ ಮೀನು ಹಿಡಿತ ಇದ್ದವ್ರು ಬಂದಿದ್ದಾರೆ ಅಂತಾರೆ.ಒಂದೆರಡು ಸಿನಿಮಾ ಹಿಟ್ ಆದ ತಕ್ಷಣ ಅಧಿಕ ಪ್ರಸಂಗ ಮಾಡುತ್ತಿದ್ದಾರೆ ಅಂತ ಹೇಳುತ್ತಾರೆ.ಆಗಾಗಿ ಚಿತ್ರ ರಂಗ ಕರೆ ನೀಡದೆ ಹೋರಾಟಕ್ಕೆ ದುಮುಕಲು ಸಾಧ್ಯವಿಲ್ಲ.ಚಿತ್ರರಂಗ ಕರೆ ನೀಡಿದ್ರೆ ಖಂಡಿತ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ವಿಚಾರ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಶಾಶ್ವತ ಪರಿಹಾರ ಸಿಕ್ಕಿಲ್ಲ.ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಲ್ಲೇ ಕಾಲ ವಿಳಂಬವಾಗುತ್ತೆ. ಕಾವೇರಿ ವಿಚಾರ ನಮಗೆ ಕೋಪ ಬರಿಸುತ್ತೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷ ಸಿದ್ದಾಂತವನ್ನ ಬದಿಗಿಟ್ಟು ಒಟ್ಟಾಗಿ ಹೋರಾಟ ಮಾಡಬೇಕಿದೆ. ಆಗ ಮಾತ್ರ ಶಾಶ್ವತ ಪರಿಹಾರ ಸಿಗುತ್ತೆ ಎಂದು ನಟ ಪ್ರಮೋದ್ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು