ರೈತರ ಹೋರಾಟಕ್ಕೆ ಬೆಂಬಲ: ಮನ್ ಕಿ ಬಾತ್ ವಿರೋಧಿಸಿ ಪ್ರತಿಭಟನೆ

ರಾಯಚೂರು,ಡಿ.೨೭- ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಹಾಗೂ ಪ್ರಧಾನಿ ಮೋದಿಯವರ ಮನ್ ಕೀ ಬಾತ್ ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಂIಏSಅಅ) ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈತ ವಿರೋಧಿ, ಕಾರ್ಮಿಕ ವಿರೋಧಿ, ಗೋ ಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ, ಆದಿವಾಸಿ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಮನ್ ಕಿ ಬಾತ್ ಕೇಳುವುದಿಲ್ಲವೆಂದು ಪ್ರಧಾನಿ ಮಂತ್ರಿ ಮೋದಿ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಎಂ.ಆರ್.ಭೇರಿ, ಹನುಮಂತು ಕಾಕರಗಲ್, ಬಸವರಾಜ್ ಗಾರಲದಿನ್ನಿ, ಎಸ್.ಮಾರೆಪ್ಪ, ಅಂಜನೇಯ ಕುರುಬದೊಡ್ಡಿ, ಶಿವರಾಜ್ ಗಂಟಿ, ಲಕ್ಷ್ಮಣ್ ಮಂಡಲಗೇರಾ, ಶ್ರೀನಿವಾಸ ಕಲವಲದೊಡ್ಡಿ, ಮುತ್ತಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.