ರೈತರ ಹಿತ ಕಾಯುವುದೇ  ಸಹಕಾರ ಸಂಘದ ಉದ್ದೇಶ.

ಸೊರಬ.ಸೆ.೨೩:ರೈತರ ಹಿತವನ್ನು ಕಾಪಾಡುವುದೇ ಸಹಕಾರ ಸಂಘದ ಮುಖ್ಯ ಗುರಿಯಾಗಿದೆ ಎಂದು ಇಂಡುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್. ರಾಜಪ್ಪ ಹೇಳಿದರು.   ೨೦೨೧-೨೨ ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳು ಸ್ಥಾಪನೆಯಾಗಿರುವುದರಿಂದ ರೈತರಿಗೆ ಅಗತ್ಯವಾಗಿರುವ ರಸಗೊಬ್ಬರ. ಕೀಟನಾಶಕ,ಬಿತ್ತನೆ ಬೀಜಗಳನ್ನು ಹಾಗೂ ಪಡಿತರವನ್ನು ವಿತರಿಸುವ ಕಾರ್ಯ ಗಳನ್ನು ಮಾಡಲು ಅನುಕೂಲವಾಗುತ್ತದೆ.ಸಹಕಾರ  ಸಂಘದ ಆರ್ಥಿಕತೆಯು ದ್ವಿಗುಣಗೊಳ್ಳಬೇಕಾದರೆ ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದಾಗ ಸಾಧ್ಯವಾಗುತ್ತದೆ ಎಂದರು.ಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿ ಸಂತೋಷಕುಮಾರ ಮಾತನಾಡಿ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ೧೨೫ ಕೋಟಿ ಸಾಲವನ್ನು ಸಹಕಾರ ಸಂಘಗಳಿಗೆ ನೀಡಿದೆ ಶೇಕಡಾ ೭೦ ರಷ್ಟು ಸಾಲವನ್ನು ಡಿಸಿಸಿ ಬ್ಯಾಂಕಿನಿಂದ. ೩೦ರಷ್ಟು ಸಾಲವನ್ನು ಸಂಘದ ಸ್ವಂತ ಬಂಡವಾಳದಲ್ಲಿ  ನೀಡಬೇಕಾಗುತ್ತದೆ  ೪.೫೫.೬೪೪ರಷ್ಟು ನಿವ್ವಳ ಲಾಭ ೩.೫ರಷ್ಟುಡಿವಿಡೆಂಡ್ ೬೫೨ ಷೇರುದಾರರಿದ್ದು ೪೦.೭೯ ಸಾವಿರ ಒಟ್ಟು ಷೇರು ಹೊಂದಿದ್ದು ೩.೫೦  ಲಕ್ಷ ಸಾಲ ನೀಡಿದ್ದು ಶೇಕಡಾ ೯೬.ಸಾಲ ವಸೂಲಾತಿ ಆಗಿದೆ ಸಹಕಾರ ಸಂಘದ ನಿಯಮಾವಳಿಯಂತೆ  ಸಾಲಗಾರರು  ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದಾಗ ಸಂಘವು ಆರ್ಥಿಕ ನಷ್ಟವನ್ನು ಅನುಭವಿಸಿದೆ ಪ್ರಗತಿದಾಯಕವಾಗಿ ಮುಂದುವರಿಯಲು ಸಾಧ್ಯವಿದೆ ಎಂದರು.ಸಂಘದ ಉಪಾಧ್ಯಕ್ಷ ಟಿ. ಚಂದ್ರಶೇಖರಪ್ಪ,ನಿರ್ದೇಶಕರುಗಳಾದ ಕೆ. ಕೃಷ್ಣಪ್ಪ,ಜಿ.ಸುಭಾಷ್,ಎ ರುದ್ರಪ್ಪ,ಕೆ.ರಾಮಪ್ಪ,ತಿಮ್ಮಪ್ಪ,ದಾನಪ್ಪ,ಹೆಚ್. ರೊಮೇಶ್,ಎಂಎನ್ ಲೋಕೇಶ್,ಜಿಪಂ ಮಾಜಿ ಸದಸ್ಯೆ ತಾರಾ ಶಿವಾನಂದಪ್ಪ,ರಘುಪತಿ,ಪ್ರಭಾಕರ ಸೇರಿದಂತೆ ಮೊದಲಾದವರಿದ್ದರು.

Attachments area