ರೈತರ ಹಿತ ಕಾಪಾಲು ಜಿಲ್ಲಾ ರೈತ ಸಂಘದಿಂದ ಮನವಿ

ಬೀದರ :ಸೆ.23:ಜಿಲ್ಲೆಯಲ್ಲಿನ ಕಬ್ಬಿನ ಎಲ್ಲಾ ಸಕ್ಕರೆ ಕಾರ್ಖಾನೆಯವರು ಭಾರತ ದೇಶದಲ್ಲಿಯೇ ಅತೀ ಕಡಿಮೆ ದರ ಕೊಡುತ್ತಿದ್ದು, ನಮ್ಮ ಬೀದರ ಜಿಲ್ಲೆ. ರೈತರನ್ನು ಮೋಸ ಮಾಡಿ, ಕಾರ್ಖಾನೆಗಳಿಗೆ ಮೇಲೆ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡುತ್ತಿದ್ದಾರೆ.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಒಂದೇ ದಿನ 25-09-2023 ರಂದು ವಾರ್ಷಿಕ ಸಾಮಾನ್ಯ ಸಭೆಯನ್ನು ನಿಗದಿಪಡಿಸಿರುತ್ತಾರೆ. ಇದರಿಂದಾಗಿ ರೈತ ಶೇರುದಾರರು ಗೊಂದಲಕ್ಕೀಡಾಗಿದ್ದಾರೆ. ಶೇ. 90% ರಷ್ಟು ಶೇರುದಾರರು ಎರಡೂ ಸಕ್ಕರೆ ಕಾರ್ಖಾನೆಗಳಲ್ಲಿ ಶೇರು ಹೊಂದಿರುತ್ತಾರೆ. ಇದರಿಂದ ಯಾವ ಸಹಕಾರ ಸಕ್ಕರೆ ಕಾರ್ಖಾನೆಗೆ ಹೋಗುವುದಕ್ಕೆ ಗೊತ್ತಾಗುತ್ತಿಲ್ಲ.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು ಸುಮಾರು 712 ಕೋಟಿ ಸಾಲ ಮಾಡಿದರೆ, ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯವರು ಸುಮಾರು 500 ಕೋಟಿ ಸಾಲದ ಹೊರೆಯಾಗಿದೆ. ಆದಕಾರಣ ಮಾಸಿಕ ಸಾಮಾನ್ಯ ಸಭೆಯನ್ನು ಬೇರೆ ಬೇರೆ ದಿನಾಂಕದಂದು ನಿಗದಿಪಡಿಸಲಾರದೇ, ಎರಡೂ ಕಾರ್ಖಾನೆಯ ಆಡಳಿತ ಮಂಡಳಿಯವರು ಉದ್ದೇಶಪೂರ್ವಕವಾಗಿ ಒಂದೇ ದಿನಾಂಕದಂದು ಸಭೆ ನಿಗದಿ ಮಾಡಿರುತ್ತಾರೆ. ಶೇರುದಾರರು ಪ್ರತ್ಯೇಕ ಕಾರ್ಖಾನೆಗೆ ಹಂಚಿಹೋಗಿ, ಶೇರುದಾರರ ಸಂಖ್ಯೆ ಸಭೆಯಲ್ಲಿ ಕಡಿಮೆ ಇರುವುದರಿಂದಾಗಿ ಹಾಗೂ ರೈತ ಮುಖಂಡರು ಯಾವುದೇ ಲೆಕ್ಕ ಕೇಳಲು ಶಕ್ತಿ ಆಗುವುದಿಲ್ಲ ಎಂಬ ಉದ್ದೇಶದಿಂದ ಒಂದೇ ದಿನ ಸಾಮಾನ್ಯ ಸಭೆ ನಿಗದಿಪಡಿಸಿದ್ದಾರೆ.
ಎರಡೂ ಕಾರ್ಖಾನೆಯ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕ್ರಮ ಕೈಗೊಂಡು, ಒಂದೇ ದಿನ ನಿಗದಿಪಡಿಸಿದ ಸಭೆ ರದ್ಧುಪಡಿಸಿ, ಯಾವುದಾದರೊಂದು ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕ ಬದಲಾಯಿಸಿ, ರೈತರಿಗೆ ಎರಡೂ ಸಭೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡಿ, ರೈತರ ಹಿತ ಕಾಪಾಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ತಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀಮಂತ ಬುರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಶಂಕರೆಪ್ಪಾ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ನಾಗಯ್ಯಾ ಸ್ವಾಮಿ, ಸುಭಾಷ ರಗಟೆ, Áಬುರಾವ ಜೋಳದಾಬಕಾ, ಪ್ರವೀಣ ಕುಲಕರ್ಣಿ, ಶಿವಾನಂದ ಹುಡಗೆ, ಸತೀಶ ನನ್ನೂರೆ, ಬಾಬುರಾವ ಬೆಟ್ಟದ, ಪ್ರಕಾಶ ಬಾವಗೆ, ಮಲ್ಲಿಕಾರ್ಜುನ ಚಕ್ಕಿ ಇದ್ದರು.