ರೈತರ ಹಿತ ಕಾಪಾಡಲು ಆಡಳಿತ ಮಂಡಳಿ ಸದಾ ಸಿದ್ದ:ಸಾಲಿಮನಿ

(ಸಂಜೆವಾಣಿ ವಾರ್ತೆ)
ಆಳಂದ:ಜ.2:ರೈತರ ಹಿತ ಕಾಪಾಡಲು ಆಳಂದ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಸದಾ ಸಿದ್ದ ಎಂದು ಉಪಾಧ್ಯಕ್ಷ ಸಿದ್ರಾಮ ಎನ್.ಸಾಲಿಮನಿ ಹಸರಗುಂಡಗಿ ನುಡಿದರು.
ತಾಲೂಕಿನ ಭೂಸನೂರ ಕಾರಖಾನೆಯ ಆಡಳಿತ ಕಚೇರಿಯಲ್ಲಿ ಜರುಗಿದ ಆಳಂದ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿಯ 39 ನೇ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಬ್ಬು ಪೂರೈಸಿದ ರೈತರಿಗೆ ತ್ವರಿತವಾಗಿ ಹಣ ಖಾತೆಗೆ ಜಮಾ ಮಾಡಬೇಕು,ಕಟಾವು,ಸಾಗಾಣಿಕೆ ಸೇರಿದಂತೆ ನೂನ್ಯತೆಗಳನ್ನು ಆಗದಂತೆ ಎನ್‍ಎಸ್‍ಎಲ್ ಘಟಕಕ್ಕೆ ಸೂಚಿಸಲಾಗುವದು ಎಂದು ಷೇರುದಾರ ಸದಸ್ಯರಿಗೆ ಭರವಸೆ ನೀಡಿದರು. ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ನಿಂಬಾಳ, ಕಾರಖಾನೆಯ ನಿರ್ದೇಶಕ ಧರ್ಮರಾಜ ಸಾಹು,ಶಾಂತೇಶ್ವರ ಪಾಟೀಲ್,ಹರ್ಷವರ್ಧನ ಗುಗ್ಗಳೆ,ಶಿವರಾಜ ಮಹಾಗಾಂವ,ನೀಲಕಂಠರಾವ ಪಾಟೀಲ್,ಪ್ರಕಾಶ ಸಣಮನಿ,ರೇಣುಕಾ ಹಾವನಳಿ,ಶಿವಪುತ್ರಪ್ಪ ಕೊಟ್ಟರಕಿ,ಶಿವರಾಜ ಪಾಟೀಲ್,ಶಂಕರ ಸೋಮಾ,ಕಮಲಾಬಾಯಿ ಸಕ್ಕರಗಾ ಇವರು ಭಾಗವಹಿಸಿದರು.ಮಾಜಿ ನಿರ್ದೇಶಕ ಚಂದ್ರಕಾಂತ ನಿಂಗದಳ್ಳಿ ಇವರು ರೈತರ ಸಮಸ್ಯಗಳು ಕುರಿತು ವಿಷಯ ಪ್ರಸ್ತಾಪ ಮಾಡಿ ಮುಂದೆ ಸಮಸ್ಯಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆಗೆ ತಿಳಿಸಿದರು.