ರೈತರ ಹಿತದೃಷ್ಟಿಯಿಂದ ಹಾಲಿನ ದರ ಹೆಚ್ಚಳ


ಚನ್ನಮ್ಮ ಕಿತ್ತೂರ,ನ1: ರೈತರ ಹಿತದೃಷ್ಟಿಯಿಂದ ಪ್ರತಿ ಲೀಟರ ಹಾಲಿನ ದರ 3 ರೂ. ಹೆಚ್ಚಿಸುವ ಚಿಂತನೆ ನಡೆದಿದೆ. ಮತ್ತು ಸರ್ವ ಮಂಡಳಿಯವರು ಜೊತೆಗೂಡಿ ಚರ್ಚಿಸಿ ಶೀಘ್ರದಲ್ಲೇ ಪರಿಹರಿಸಲಾಗುವುದೆಂದು ಅರಭಾವಿ ಶಾಸಕ ಹಾಗೂ ರಾಜ್ಯ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ತಾಲೂಕಿನ ಹೂಲಿಕಟ್ಟಿ ಕ್ರಾಸ್‍ದಲ್ಲಿ 10ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲಿಕರಣ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಹಾಲಿನ ದರ ದಲ್ಲಾಳಿಗಳ ಕೈಗೆ ಸೇರದ ನೇರವಾಗಿ ರೈತರ ಕೈಗೆ ಸೇರಬೇಕು. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‍ಗೆ ದರ ಹೆಚ್ಚಿಸಲು. ಪ್ರಸ್ತಾವನೆ ಸಲ್ಲಿಸಿದ್ದವು. ರೈತರ ಹಿತ ಕಾಯುವ ಸಲುವಾಗಿ ದರ ಏರಿಕೆ ಮಾಡುವುದು ಅನಿವಾರ್ಯವಾಯಿತು. ಈ ಕುರತಂತೆ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ ಎಂದರು.
ಹಾಲು ಶೇಖರಣೆ ಘಟಕ 30 ಸಾವಿರ ಲೀಎರ್ ಸಾಮಥ್ರ್ಯ ಹೊಂದಿದ್ದು 5 ಎಕರೆ ಜಾಗೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಈಗಾಗಲೇ ಕೆಎಂಎಫ್ ಒಕ್ಕೂಟದಿಂದ 5 ಕೋಟಿ ವೆಚ್ಚ ನೀಡಲಾಗಿದೆ. ಹಸು ಮತ್ತು ಎಮ್ಮೆಗಳ ಹಾಲನ್ನು ಪ್ರತ್ಯಕವಾಗಿ ತೆಗೆದುಕೊಳ್ಳುವ ಕ್ರಮ ಕೈಗೊಳ್ಳಲಾಗುವುದು. ನೂತನ ಹಾಲು ಕ್ರೋಢೀಕರಣ ಕೇಂದ್ರಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮಳ ಹೆಸರನ್ನು ಇಡಲಾಗುವುದೆಂದು ಭರವಸೆ ನೀಡಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು.
ನಿಚ್ಚಣಕಿ ಮಠದ ಪಂಚಾಕ್ಷರಿ ಸ್ವಾಮಿಜಿ, ನಯನಗರ ಸುಖುದೇವಾನಂದ ಸ್ವಾಮಿಜಿ, ಕಿತ್ತೂರ ಕಲ್ಮಠ ರಾಜಗುರು ಸಂಸ್ಥಾನ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ, ಹೂಲಿಕಟ್ಟಿ ಹೊಸಗೇರಿ ಮಠದ ಲಿಂಗಾನಂದ ಸ್ವಾಮಿಜಿ ಸಾನಿಧ್ಯವಹಿಸಿದ್ದರು.
ಜಿಲ್ಲಾ ಹಾಲು ಒಕ್ಕೂಟದ ವಿವೇಕರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕೆಎಂಎಫ್ .ಎಂ.ಡಿ, ಬಿ.ಸಿ. ಸತೀಶ, ಅಂಬಡಗಟ್ಟಿ ಗ್ರಾ.ಪಂ ಅಧ್ಯಕ್ಷ ಶ್ರೀಧರ ಅಕ್ಕಿ, ಬೆಮೂಲ್ ನಿರ್ದೇಶಕ ಬಾಬು ಕಟ್ಟಿ, ಡಾ|| ಬಸವರಾಜ ಪರವನ್ನವರ, ಸೋಮಲಿಂಗಪ್ಪ ಮುಗಳಿ, ಉದಯಸಿಂಹ ಸಿಂಗ್, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರಿಯನ್ನವರ, ಅಪ್ಪಾ ಸಾಹೇಬ, ಅವತಾಡೆ, ಬಾಬುರಾವ್ ವಾಘ್ಮೋಡೆ, ವಿರುಪಾಕ್ಷಪ್ಪ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಸುರೇಶ ಪಾಟೀಲ, ಸಂಗಪ್ಪ ಪವಡೆಪ್ಪನವರ, ಜಿಲ್ಲಾ ಸಹಕಾರಿ ಯೂನಿಯನ್ ಅಂಗಡಿ, ಜೆ. ಶ್ರೀನಿವಾಸ, ಶೃತಿ ಜಾಧವ ಸೇರಿದಂತೆ ಹಲವರಿದ್ದರು.