ರೈತರ ಹಿತಕ್ಕಾಗಿ ಸರ್ಕಾರ ಸದಾ ಸಿದ್ದವಿದೆ :ಉಮೇಶ ಕತ್ತಿ

ಕೆಂಭಾವಿ:ಅ.30:ಸದಾಕಾಲ ರೈತರ ಹಿತ ಚಿಂತನೆಯನ್ನು ಬಯಸುವ ಮತ್ತು ರೈತಪರವಾಗಿ ಇರುವ ನಮ್ಮ ಸರ್ಕಾರ ರೈತರ ಬೆಳೆಗಳಿಗೆ ಕಾಲುವೆಗೆ ನೀರು ಹರಿಸಲು ನಮ್ಮ ಸರ್ಕಾರ ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ ಕತ್ತಿ ಹೇಳಿದರು.
ಪಟ್ಟಣದ ಗುತ್ತಿ ಬಸವಣ್ಣ ಇಂಡಿ ಏತ ನೀರಾವರಿ ಪ್ರದೇಶದ ಜಾಕ್‍ವೆಲ್‍ಗೆ ಸೋಮವಾರ ಭೇಟಿ ನೀಡಿ ದುರಸ್ತಿ ಕಾರ್ಯ ಪರಿಶೀಲನೆ ನಡೆಸಿ ಮಾತನಾಡಿದ ಅವರು ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಸಿದ್ಧವಾಗಿದ್ದು ಯಾವುದೆ ಕಾರಣಕ್ಕೂ ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ತಾರತಮ್ಯ ಎಸಗಿಲ್ಲ. ಈ ಏತ ನೀರಾವರಿ ಪ್ರದೇಶದಿಂದ ವಿಜಯಪೂರ ಜಿಲ್ಲೆಯ ಅತೀ ಹೆಚ್ಚು ರೈತರಿಗೆ ಅನುಕೂಲವಾಗಿದ್ದು ಮೂರೂ ಜಿಲ್ಲೆಯ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಇಲ್ಲಿರುವ ಒಟ್ಟು ಎಂಟು ಯಂತ್ರಗಳಲ್ಲಿ ತುರ್ತಾಗಿ ಈಗ ನಾಲ್ಕು ಯಂತ್ರಗಳು ದುರಸ್ತಿಯಾಗಿದ್ದು ಮೊದಲಿಗೆ ಕಾಲುವೆಯ 47ನೇ ಕಿಮೀ ವರೆಗೆ ನಾಳೆಯಿಂದ ನೀರು ಹರಿಯಲಿದೆ ಎಂದು ಹೇಳಿದರು.
ಸೆಪ್ಟಂಬರ್ ಅಂತ್ಯದವರೆಗೆ ಆರು ಯಂತ್ರಗಳ ಮೂಲಕ 97 ಕಿಮೀ ವರೆಗೆ ಕಾಲುವೆಗೆ ನೀರು ಹರಿಸಿ ಹಂತಹಂತವಾಗಿ ಅಕ್ಟೋಬರ್ ಕೊನೆಯ ವಾರದವರೆಗೆ ಏಳು ಮೋಟಾರ್ ಮೂಲಕ 140 ಕಿಮೀ ವರೆಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಶಹಾಪೂರ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ಸಿಂದಗಿ ಶಾಸಕ ರಮೇಶ ಭೂಸನೂರ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ವಿಜಯಪೂರ ಜಿಪಂ ಸಿಇಒ ರಾಹುಲ ಪಾಂಡೆ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನೀಯರ್ ಎಸ್. ಡಿ. ನಾಯಕ, ಎಸ್.ಇ ಜಿ.ವಿ. ವೆಂಕಟೇಶಲು, ಇಇ ಬಾಬು ಒಡೆಯರ್, ಮುಖಂಡರಾದ ಬಸನಗೌಡ ಹೊಸಮನಿ, ಬಸವರಾಜ ಚಿಂಚೋಳಿ, ಪುರಸಭೆ ಸದಸ್ಯ ರವಿ ಸೊನ್ನದ, ಮಹಿಪಾಲರೆಡ್ಡಿ ಡಿಗ್ಗಾವಿ, ಕಲೀಂ ಪಾಶಾ,ವಿಕಾಸ ಸೊನ್ನದ , ರಂಗಪ್ಪ ವಡ್ಡರ್ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರುಗಳು ಸೇರಿದಂತೆ
ವಿಜಯಪೂರ ಜಿಲ್ಲೆಯ ಹಲವಾರು ರೈತ ಮುಖಂಡರುಗಳು, ಅಧಿಕಾರಿಗಳು ಇದ್ದರು.

ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲೆ ಬಂದ ಆಪಾದನೆ ಬಗ್ಗೆ ಮಾಧ್ಯಮದ ಮೂಲಕ ಗೊತ್ತಾಯಿತು. ಈ ಬಗ್ಗೆ ಸರ್ಕಾರ ಅತೀ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತಿದ್ದು ಪೆÇಲೀಸರು ಈ ಬಗ್ಗೆ ತನಿಖೆ ಕೈಗೊಳ್ಳಲಿದ್ದಾರೆ. ಈ ವಿಚಾರವಾಗಿ ನಾನು ಯಾವುದೆ ಹೇಳಿಕೆ ನೀಡಲು ಬರುವುದಿಲ್ಲ. ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ, ಪೆÇಲೀಸ್ ಇಲಾಖೆಗಳು ಸದಾ ಸನ್ನದ್ಧವಾಗಿದ್ದು ಮಳೆಯ ಕಾರಣದಿಂದ ಸೆರೆ ಕಾರ್ಯಾಚರಣೆಯಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ ಶತಾಯ ಗತಾಯ ಚಿರತೆಯನ್ನು ಸೆರೆ ಹಿಡಿಯಲಾಗುವುದು.
ಉಮೇಶ ಕತ್ತಿ. ಸಚಿವ