ರೈತರ ಸಾಲ ವಸೂಲಿ ಬೇಡ. ರೈತ ಸಂಘ ಆಗ್ರಹ

ಸಿಂಧನೂರು. ಜೂ.೩೦ ಮುಂಗಾರು ಮಳೆ ವಿಫಲ ವಾದ ಕಾರಣ ರೈತರು ಸಂಕಷ್ಟದಲ್ಲಿ ಇದ್ದು ಇಂಥಹ ಸಂದರ್ಭದಲ್ಲಿ ರಾಷ್ಟ್ರೀಯ ಕೃತ ಬ್ಯಾಂಕಗಳು ಸಾಲ ವಸೂಲಿಗೆ ಮುಂದಾಗಿದ್ದು ಸರಿಯಲ್ಲ ಕೂಡಲೆ ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ .ಹಸಿರು ಸೇನೆ ಮುಖಂಡರಾದ ಅಮೀನ ಪಾಷಾ ದಿದ್ದಿಗಿ ರಾಜ್ಯ ಸರ್ಕಾರ ವನ್ನು ಅಗ್ರಹ ಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ರೈತ ಸಾಲ ಮನ್ನಾ ಮಾಡುವ ಬಗ್ಗೆ ಭರವಸೆ ನೀಡಿದ್ದು ಈಗ ಕಾಂಗ್ರೆಸ್ ಸರ್ಕಾರ ಅಧಿಕಾರ ಕ್ಕೆ ಬಂದಿದ್ದು ರೈತ ಸಾಲ ಮನ್ನ ಮಾಡಬೇಕು ಭ್ಯಾಂಕಗಳು ಸಾಲ ವಸೂಲಿಗೆ ಬಂದಿದ್ದು ವಸೂಲಿ ಮಾಡುವದನ್ನು ತಡೆಯ ದಿದ್ದರೆ ಬೀದಿಗಿಳಿದು ಹೋರಾಟ ಮಾಡುವಾದಾಗಿ ಸರ್ಕಾರ ಕ್ಕೆ ಎಚ್ಚರಿಕೆಯನ್ನು ನೀಡಿದರು.
ಎಪಿಎಂಸಿ ಕಾಯ್ದ ವಾಪಾಸು ಪಡೆದ ಸರ್ಕಾರ ಭೂ. ಜಾನವಾರು ಕಾಯ್ದಗಳನ್ನು ಸಹ ಸರ್ಕಾರ ವಾಪಾಸು ಪಡೆಯಬೇಕು ವಿದ್ಯುತ ಬೆಲೆ ವಿಪರೀತ ಬರುತ್ತಿದ್ದು ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಕೂಡಲೆ ವಿಧ್ಯತು ಬೆಲೆ ಏರಿಕೆಯನ್ನು ಸರಿಪಡಿಸಬೇಕು
ಜೋಳ ಖರೀದಿ ಮಾಡಿ ೩ ತಿಂಗಳಾದರು ಸಹ ಸರ್ಕಾರ ರೈತರಿಗೆ ಹಣ ನೀಡಿಲ್ಲ ಇದರಿಂದ ರೈತರಿಗೆ ತೊಂದರೆ ಯಾಗಿದ್ದು ಕೂಡಲೆ ಜೋಳ ಖರೀದಿ ಹಣ ಹಾಕಬೇಕು ಎಂದರು
ಬೀಮ ಆರ್ಮೀ ಮುಖಂಡರಾದ ಚಂದ್ರಶೇಖರ ಅಜಾದ ಮೇಲೆ ಗುಂಡಿನ ದಾಳಿ ಮಾಡಿದ್ದ ನ್ನು ರೈತ ಸಂಘ ಖಂಡಿಸುತ್ತೇದೆ ಕೂಡಲೆ ಆರೋಪಿಗಳನ್ನು ಬಂದಿಸಿ ಕಠಿಣ ಶಿಕ್ಷೆ ನೀಡಬೇಕು ರಾಜ್ಯ ಸರ್ಕಾರವನ್ನು ವಜಾಮಾಡುವಂತೆ ರಾಷ್ಟ್ರಪತಿ ಗಳನ್ನು ಒತ್ತಾಯ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಬಸವರಾಜ ಹಂಚಿನಾಳ, ಪ್ರಹ್ಲಾದ ರೆಡ್ಡಿ, ಜಲಂದರ ಗೌಡ,ಈಸೂಪ ಸಾಬ, ವೆಂಕಟರೆಡ್ಡಿ, ಇಸ್ಮಾಯಿಲ್ ಸತ್ಯ ನಾರಾಯಣ, ಸೇರಿದಂತೆ ಇತರರು ಇದ್ದರು.