ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು, ಜು.೧೨- ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನವಿ, ಸಿಂಧನೂರು ಖರೀದಿ ಕೇಂದ್ರಗಳಲ್ಲಿ ಜೋಳ ಖರೀದಿ ಕೊಂಡಂತ ರೈತರಿಗೆ ತಕ್ಷಣ ಹಣ ಮರಳಿ ಪಾವತಿಸಬೇಕು.ಜಿಲ್ಲೆಯಲ್ಲಿ ಭೀಮಾ ಫಸಲು ಬೆಳೆ ವಿಮೆ ತುಂಬಿದವರಿಗೆ ಹಣ ಪಾವತಿಸಬೇಕು.ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿ.ಟಿ. ಹತ್ತಿ ನಾಟಿ ಮಾಡಿದ ಮೇಲೆ ರೋಗ ತಗುಲಿ ಸಾವಿರಾರು ಎಕರೆ ನಷ್ಟವಾಗಿದೆ ಕೂಡಲೇ ಪರಿಹಾರ ನೀಡಬೇಕು.
ಜಿಲ್ಲೆ,ತಾಲೂಕು, ಹೋಬಳಿಯಲ್ಲಿ ಹಾಕಿದ ಬಿ.ಟಿ. ಹತ್ತಿ ತಳಿಹಾಕಿದ ರೈತರು ಗಿಡ ಕೆಂಪು ಹಳದಿ ಬಣ್ಣಕ್ಕೆ ಬಂದು ಒಣಗಿ ಹೋಗಿವೆ. ಬಹಳಷ್ಟು ರೈತರು ನಷ್ಟ ಹೊಂದಿದ್ದಾರೆ. ಅದೇ ಬೀಜವನ್ನು ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಿದ್ದಾರೆ. ಈ ಒಂದು ಕೆಂಪು, ಹಳದಿ, ಬಿಳಿ ಗಿಡವನ್ನು ಜಿಲ್ಲೆಯ ಕೆ.ವಿ.ಕೆ. ಕೃಷಿ ಕೂಡ ನೀಡಲಾಗಿದೆ. ಈ ಒಂದು ಸಮಸ್ಯೆಯನ್ನು ಮ್ಯಾಗ್ನಿಷಿಯಂ ಹಾಗೂ ಮೆನೊಕೊಟೋಫಸ್ ಎಂ-೪೫ ಇಂತಹ ವಸ್ತುಗಳಿಂದ ಸಿಂಪಡಿಸಲಾಗಿದೆ ಆದರೂ ಕೂಡ ಹಾಕಿದಂತಹ ಬೆಳೆ ಹತೋಟಿಗೆ ಬಂದಿಲ್ಲ. ಸಾವಿರಾರು ರೈತರು ಈ ಬೆಳೆಯನ್ನು ಕಿತ್ತುಹಾಕಿ ಪರ್ಯಾಯ ಬೆಳೆಗೆ ಮುಖಮಾಡಿದ್ದಾರೆ. ಇದೇ ಬಿ.ಟಿ. ಹತ್ತಿ ೨೦೧೬ರಲ್ಲಿ ಪಿಂಕ್ ಬೌಲರ್ ಈ ಒಂದು ಹುಳ ಕಾಣಿಸಿಕೊಂಡಿತ್ತು. ಈ ಹತ್ತಿಯನ್ನು ಹೊಲದಿಂದ ಬಿಡಿಸಿಕೊಂಡು ಮನೆಗೆ ಹೋಯ್ದರೆ ಮನೆಯಲ್ಲಿನ ಜನಕ್ಕೆ ಮೈ ಎಲ್ಲಾ ತಿಂಡಿ, ಈ ಬಿ.ಟಿ ತಳಿಯನ್ನು ತೆಗೆದುಹಾಕಿ ಹಿಂದೆ ಇದ್ದ ನಾನ್ ಬಿ.ಟಿ. ತಳೆಯನ್ನು ರೈತರಿಗೆ ವಿತರಣೆ ಮಾಡಿ ಎಂದು ಸರ್ಕಾರಕ್ಕೆ ಕೃಷಿ ವಿಜ್ಞಾನಿಗಳಿಗೆ ರೈತರು ಬೇಡಿಕೆ ಇಟ್ಟಿದ್ದರು. ಆದರೂ ಕೂಡ ಈ ಬಗ್ಗೆ ಸರ್ಕಾರವು ಆಗಲೀ, ಕೃಷಿ ವಿಜ್ಞಾನಿಗಳಾಗಲೀ ರೈತರ ಬಗ್ಗೆ ಕಾಳಜಿಯನ್ನು ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಒಂದು ವಾರದಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣ ಗೌಡ ಕಡಗಂದೊಡ್ಡಿ, ಕೆ.ವೀರೇಶ ಗೌಡ, ಮಜೀದಸಾಬ್ ಬಿಚ್ಚಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.