ರೈತರ ಸಾಲಮನ್ನಾ ಮಾಡಿದ್ದು ಕುಮಾರಣ್ಣ

ಚಿಕ್ಕಬಳ್ಳಾಪುರ, ಏ.೨೭- ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರವರ ಆಡಳಿತದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ರೂ ೨೫,೦೦೦ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಇವರ ಆಡಳಿತದಿಂದ ಜನತೆ ಪಡೆದ ಉಪಯೋಗವನ್ನು ಇನ್ನೂ ಮರೆತಿಲ್ಲ ಎಂದು ಜಾತ್ಯಾತೀತ ಜನತಾದಳ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎನ್. ರಘು ತಿಳಿಸಿದರು.
ಅವರು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡ ಸುಮಾರು೩೦೦ ಕ್ಕೂ ಅಧಿಕ ಯುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದರು.
ಮೇ ಹತ್ತರಂದು ನಡೆಯಲಿರುವ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಮತದಾರರು ಸ್ವಚ್ಛ ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿರುವ ಕೆ.ಪಿ. ಬಚ್ಚೇಗೌಡ ರವರನ್ನು ಜಯಶೀಲರನ್ನಾಗಿ ಮಾಡುವವರು ಆದ ಕಾರಣ ಜೆ.ಡಿ.ಎಸ್ .ಕಾರ್ಯಕರ್ತರುಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ
ಮುಖಂಡುರುಗಳದ ಆಡಿ. ಪ್ರಶಾಂತ್, ರಾಜಣ್ಣ, ಸ್ವರೂಪ್ ಬಚ್ಚೇಗೌಡ, ಕಪಿಲ್ ದೇವ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.