ರೈತರ ಸಾಗುವಳಿ ಭೂಮಿ ಪಟ್ಟಕ್ಕಾಗಿ ರೈತ ಸಂಘ ರಸ್ತೆ ತಡೆದು ಪ್ರತಿಭಟನೆ

ಸಿಂಧನೂರ.ಜು.೧೯- ಮಸ್ಕಿ ಹಾಗೂ ಸಿಂಧನೂರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಬಗರ್ ಹುಕಂ ರೈತರ ಸಾಗುವಳಿ ಭೂಮಿಗೆ ಪಟ್ಟಾ ಹಾಗೂ ನಿವೇಶನ ಹಕ್ಕುಪತ್ರ ಕೊಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರೈತ ಸಂಘದಿಂದ ಇಂದು ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.
ನಗರದ ಎಪಿಎಂಸಿ ಗಣೇಶ ಗುಡಿಯಿಂದ ಆರಂಭಗೊಂಡ ಪ್ರತಿಭಟನೆ ಮೆರವಣಿಗೆಯು ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಮೆರವಣಿಗೆಯ ನಡೆಸಿ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆ ಮೆರವಣಿಗೆ ಗಾಂಧಿ ಸರ್ಕಲ್‌ಗೆ ಬಂದು ರಸ್ತೆತಡೆ ನೆಡೆಸಿ ಸರ್ಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿಸದೆ ನಿರ್ಲಕ್ಷ್ಯ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು ರಸ್ತೆ ತಡೆ ಯಿಂದ ರಸ್ತೆ ಸಂಚಾರ ಅಸ್ತ ವ್ಯಸ್ತ ಗೊಂಡಿತ್ತು ಸಿಂಧನೂರ ಹಾಗು ಮಸ್ಕಿ ವಿಧಾನ ಸಭಾದ ಶಾಸಕರು ಜನವಿರೋಧಿ ಕೆಲಸ ಮಾಡದೇ ಜನ ಪರ ಕೆಲಸ ಮಾಡಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾತ್ತದೆಂದು ಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಡಿ.ಎಚ್ ಪೂಜಾರಿ ಶಾಸಕರುಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ರಮೇಶ ಪಾಟೀಲ್, ಬಿ.ಎನ್. ಯರದಿಹಾಳ ಚಿಟ್ಟಿಬಾಬು, ಸಂತೋಷ ಹೀರೆದಿನ್ನಿ, ಬಸವರಾಜ ಬಾದರ್ಲಿ, ಅಮೀನ ನದಾಫ್, ಶ್ರೀನಿವಾಸ ಬುಕ್ಕನಟ್ಟಿ, ಮಾರುತಿ ಜಿನ್ನಾಪುರ ಸೇರಿದಂತೆ ಇತರರು ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಂಡಿದ್ದರು.