ರೈತರ ಸಾಗುವಳಿ ಭೂಮಿಗೆ ಹಕ್ಕು ಪತ್ರ ನೀಡಲು ಆಗ್ರಹ

ಸಂಡೂರು :ಮಾ: 30: 4: ಅನುಸೂಚಿತ ಬುಡಕಟ್ಟು ಮತ್ತು ಪಾರಂಪಾರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 ಮತ್ತು ನಿಯಮಗಳು -2008 ಅಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆಗಳಂತೆ ತಲತಾಲಾಂತರಗಳಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಬುಡಕಟ್ಟು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಇತರೆ ಪಾರಂಪಾರಿಕೆ ಬಡ ಕುಟುಂಬಗಳಿಗೆ ಭೂಮಿಯ ಹಕ್ಕು ನಿರಾಕರಿಸುವುದನ್ನು ತೀವ್ರವಾಗಿ ವಿರೋಧಿಸಿತ್ತೇವೆ, ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡದೆ ಐತಿಹಾಸಿಕ ಅನ್ಯಾಯ ಉಯಂಟುಮಾಡಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಸಲ್ಲಿಸಿದ ಸಾಗುವಳಿದಾರರಿಗೆ ಭೂಮಿ ಪಟ್ಟ ನೀಡಲು ಒತ್ತಾಯಿಸುತ್ತೇವೆ. ರೈತರ ಸ್ವಾಧೀನದಲ್ಲಿ ಸರ್ಕಾರದ ಭೂಮಿಯನ್ನು ಉಳುಮೆ ಮಡಿಕೊಂಡು ಬಂದಿದ್ದೆ. ಅನಾಧೀನ, ಬಗರ್ ಹುಕುಂ ಗೋಮಾಳ ಇತ್ಯಾದಿ ಹೆಸರಿನಲ್ಲಿ ಸಾಗುವಳಿ ಭೂಮಿಗೆ ಅರ್ಜಿಸಲ್ಲಿಸಿದ ಸಾಗುವಳಿ ದಾರರಿಗೆ ಭೂಮಿ ಪಟ್ಟ ನೀಡಲು ಒತ್ತಾಯಿಸುತ್ತೇವೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಯು. ಬಸವರಾಜ ಮಾತನಾಡಿ ತಾಲೂಕಿನಾದ್ಯಂತ ರೈತರು 20-30 ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಅವರಿಗೆ ಭೂಮಿ ನೀಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ, ಈಗ ತಾನೇ ಬಂದ ಕಾರ್ಖಾನೆಗಳಿಗೆ ತಕ್ಷಣ ಭೂಮಿ ನೀಡುವ ಮೂಲಕ ಅವರನ್ನು ರಕ್ಷಿಸುತ್ತಿದ್ದಾರೆ, ರೈತರನ್ನು ವ್ಯವಸ್ಥಿತರವಾಗಿ ಒಕ್ಕಲೆಬ್ಬಿಸುತ್ತಿದ್ದಾರೆ, ಅದ್ದರಿಂದ ತಕ್ಷಣ ರೈತರಿಗೆ ಹಕ್ಕು ಪತ್ತ ನೀಡದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜೆ.ಎಂ. ಚನ್ನಬಸಯ್ಯ ಮಾತನಾಡಿ ತಾಲೂಕಿನಲ್ಲಿ 3689 ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಸಂಡೂರು ತಾಲೂಕಿನ ಬಳ್ಳಾರಿ ಅರಣ್ಯ ವಲಯದ ಮೆಟ್ರಿಕಿ 166, ವಿಠ್ಠಲಾಪುರ 180, ಅಂತಾಪುರ 31, ಸಂಡೂರು ದಕ್ಷಿಣ ವಲಯದ ದೇವಗಿರಿ 184 ತಾರಾನಗರ 55, ಯು.ರಾಜಾಪುರ 25, ಕಾಳಿಂಗೇರಿ 94, ಯರ್ರಯ್ಯನಹಳ್ಳಿ 48, ಸಂಡೂರು ಉತ್ತರ ವಲಯದ ತಾಳೂರು 54, ಕೃಷ್ಣಾನಗರ 229, ಸುಶೀಲಾನಗರ 802, ಕೂಡ್ಲಿಗಿ ವಲಯದಲ್ಲಿ ಅಗ್ರಹಾರ 130, ಹೆಚ್.ಕೆ. ಹಳ್ಳಿ 77. ನಿಡಗುರ್ತಿ 119, ಅರ್ಜಿ ಸಲ್ಲಿಸಲಾಗಿದ್ದು ಇವರಿಗೆ ಪಟ್ಟ ನೀಡಿರುವುದಿಲ್ಲ, ಅದ್ದರಿಂದ ತಕ್ಷಣ ಸರ್ಕಾರದ ನಿಯಮಾನುಸಾರ ವಿಶೇಷ ಸಮಿತಿಯಲ್ಲಿ ಹಿರಿಯರ ಹೇಳಿಕೆ ಪಡೆದು ಹಕ್ಕು ಪತ್ರ ನಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಸ್ವಾಮಿ, ವಿ.ಶಿವಶಂಕರ್, ಯು.ತಿಪ್ಪೇಸ್ವಾಮಿ, ದುರ್ಗಮ್ಮ, ಕೊಂಡಾಪುರ, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದು ಪ್ರತಿ ಭಟಿಸಿ ಮನವಿ ಪತ್ರ ತಲಸಲಿಸಿದರು.