ರೈತರ ಸಾಗುವಳಿ ಜಮೀನಿನ ಪಟ್ಟಾ ನೀಡಲು ಆಗ್ರಹ

ಸಂಜೆವಾಣಿ ವಾರ್ತೆಸಂಡೂರು:ಅ:12:  ಸಂಡೂರು ಅರಣ್ಯ ಪ್ರದೇಶದ 4 ಬಾಕ್‍ಗಳನ್ನು ಸರ್ವೆ ಸೆಟಲ್ ಮೆಂಟ್ ಮಾಡಿ ಹಾಗೂ ಕಂದಾಯ ಮತ್ತು ಆರಣ್ಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಅರಣ್ಯ, ಜಮೀನುಗಳಲ್ಲಿ ತಲತಲಾಂತರಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಗುರುತಿಸಲು ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಹಕ್ಕು ಪತ್ರ ಕೊಡಬೇಕು ಎಂದು ಅಖಿಲಭಾರತ ಕಿಸಾನ್ ಸಭಾದ ರಾಜ್ಯ ಮುಖಂಡ ಕೆ.ನಿಂಗಪ್ಪ ಒತ್ತಾಯಿಸಿದರು.ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ತಾಲೂಕಿನ ರೈತರು ಹಾಗೂ ಅಖಿಲಭಾರತ ಕಿಸಾನ್ ಸಭಾದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಭಟನೆ ಹಾಗೂ ಮನವಿ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮಾತನಾಡಿ ತಲಾಂತರಗಳಿಂದ ಅರಣ್ಯ ಜಮೀನುಗಳಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ರೈತರು, ಅವರ ಜಮೀನುಗಳ ಸಕ್ರಮ ಮನವಿ ಮಾಡುವುದೇನೆಂದರೆ, ಸಂಡೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ À ಅರ್ಜಿಗಳನ್ನು ಸಲ್ಲಿಸಿದ್ದು ಅವರಿಗೆ ಹಕ್ಕುಪತ್ರಗಳನ್ನು ನೀಡಬೇಕು, ಅಲ್ಲದೆ ಸಂಡೂರು ಅರಣ್ಯ ಪ್ರದೇಶ ರಾಜ ಮಹಾರಾಜರ ಅಳ್ವಿಕೆಗೆ ಒಳಪಟ್ಟ ಕಾರಣ ಸರಿಯಾದ ಸರ್ವೇ ಸೆಟಲ್‍ಮೆಂಟ್ ಅಗಿಲ್ಲ ಅದ್ದರಿಂದ ನ್ಯಾಯಾಲಯದ ಅದೇಶದಂತೆ ಆರಣ್ಯಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ, ಅವರ ಅರ್ಜಿಗಳನ್ನು ಪರಿಶೀಲಿಸಿ ರೈತರು, ಜಮೀನುಗಳ ಸಕ್ರಮಕ್ಕೆ ಬಹಳಷ್ಟು ಸಮಸ್ಯೆಗಳು ಉಂಟಾಗಿದ್ದು ಅದ್ದರಿಂದ ಬಹಳಷ್ಟು ರೈತರು ಭೂಮಿ ಕಳೆದು ಬೀದಿಗೆ ಬೀಳುತ್ತಿದ್ದಾರೆ ಅದ್ದರಿಂದ ಸರ್ವ ಸೆಟಲ್‍ಮೆಂಟ್ ಮಾಡಿ ಹಕ್ಕು ಪತ್ತ ಕೊಡಿ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗಿರಿರಾವ್, ಕಾರ್ಯದರ್ಶಿ ಅರ್. ಸ್ವಾಮಿ, ಉಪಾಧ್ಯಕ್ಷ ಅಬ್ದುಲ್ ವಾಹಬ್, ನಾಗರಾಜ, ಸಿದ್ದಪ್ಪ, ವಿಜಯಕುಮಾರ್ ಚೌಡಪ್ಪ, ನರಸಪ್ಪ, ಬಡೇನ್‍ಸಾಬ್, ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.