ರೈತರ ಸಮಸ್ಯೆ ಆಲಿಸಿದ ಡಿಸಿಎಂ

ಆನೇಕಲ್.ಏ.೧೪:ಹಂದೇನಹಳ್ಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಐಎಡಿಬಿ ಇಲಾಖೆಯು ಕೈಗಾರಿಕಾ ಅಭಿವೃದ್ಧಿಗೆ ೬೦೦ ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾದ ಹಿನ್ನಲೆಯಲ್ಲಿ ಇಲ್ಲಿನ ರೈತರು ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಭೂಸ್ವಾಧೀನ ಅಧಿಸೂಚನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಪ್ರತಿಭಟಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಎಸ್.ಮೇಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಚರ್ಚೆ ನಡೆಸಿ ಹೊರಡಿಸಲಾದ ಅಧಿಸೂಚನೆಯ ಕಡತಗಳನ್ನು ಪರಿಶೀಲಿಸಿ ನಂತರ ಮಾತನಾಡಿದ ಅವರು ಚುನಾವಣೆ ನೀತಿ ಸಂಹಿತೆ ಇರುವುದರಿಂದ ಇದರ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಲೋಕಸಭೆ ಚುನಾವಣೆ ನಂತರ ಅದಿಕಾರಿಗಳ ಜೊತೆಗೆ ಚರ್ಚೆ ನಡೆಸಿ ರೈತರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದರು.
ಸ್ಥಳದಲ್ಲಿ ಶಾಸಕ ಬಿ.ಶಿವಣ್ಣ, ರೈತ ಮುಖಂಡರಾದ ಹಂದೇನಹಳ್ಳಿ ರಾಮಚಂದ್ರಾರೆಡ್ಡಿ, ನಾಗೇಶ್ ರೆಡ್ಡಿ, ಪ್ರಶಾಂತ್ ರೆಡ್ಡಿ, ದಶರಥ್, ಅರುಣ್ ಕುಮಾರ್, ಸುರೇಶ್ ರೆಡ್ಡಿ, ಹಂದೇನಹಳ್ಳಿ ಶ್ರೀನಿವಾಸ್ ರೆಡ್ಡಿ, ಬಿಲ್ಲಾಪುರ ವೇಣು, ಮುಖಂಡರಾದ ಡಿ.ಕೆ.ವಿನೋದ್, ಸುಶೀಲಮ್ಮ, ಕೆ.ಪಿ.ರಾಜು, ಬಾಬುರೆಡ್ಡಿ, ಮೋಹನ್ ಬಾಬು, ರಘುಪತಿರೆಡ್ಡಿ, ಲಿಂಗಣ್ಣ ಮತ್ತು ರೈತರು ಹಾಜರಿದ್ದರು.