ಬಂಗಾರಪೇಟೆ, ಏ-೨೫, ಕಾಡಾನೆಗಳ ಹಾವಳಿಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೧೦ ಲಕ್ಷ ಪರಿಹಾರ ನೀಡುವ ಜೊತೆಗೆ ಗಡಿಭಾಗದ ರೈತರ ಸಮಸ್ಯೆಗೆ ಸ್ಪಂದಿಸದ ಜನ ಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ನೊಂದ ರೈತರಿಗೆ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ರವರು ನೊಂದ ರೈತರಿಗೆ ಮನವಿ ಮಾಡಿದರು.
ಗಡಿಭಾಗದ ರೈತರ ಸಮಸ್ಯೆಗಳಿಗೆ ಸ್ಪಂಧಿಸದೆ ಮತ ಕೇಳಲು ಬರುವ ಮೂರು ಪಕ್ಷದ ಅಭ್ಯರ್ಥಿಗಳಿಗೆ ನೊಂದ ರೈತರಿಂದ ಆನೆ ಲದ್ದಿ ಚಳುವಳಿ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಅರಣ್ಯ ಅಧಿಕಾರಿಗಳಿಗೆ ನೀಡಿದರು.
ನೊಂದ ರೈತರ ತೋಟಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕಾಡಾನೆಗಳ ಹಾವಳಿಯಿಂದ ನಷ್ಟವಾಗಿರುವ ಗಡಿಭಾಗದ ಸಾಕರಸನಹಳ್ಳಿ ದೋಣಿಮಡಗು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ರೈತರ ತೋಟಗಳಿಗೆ ನುಗ್ಗಿದ ಮೂರು ಕಾಡಾನೆಗಳು ಹತ್ತಾರು ವರ್ಷಗಳಿಂದ ಜೀವನ ನಿರ್ವಹಣೆಗೆ ಆಧಾರವಾಗಿದ್ದ ವೀಳದೆ ಎಲೆ ತೋಟ ಹಾಗೂ ರಾಗಿ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಮುಖಾಂತರ ರೈತರ ಬದುಕನ್ನು ಕಸಿಯುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಅರಣ್ಯ ಇಲಾಖೆ ಹಾಗೂ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಪ್ರತಿ ವರ್ಷ ರೈತರ ನಿದ್ದೆಗೆಡಿಸುತ್ತಿರುವ ಕಾಡಾನೆಗಳು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಸಮೃದ್ದವಾಗಿ ಬಂದು ಕೈಗೆ ಸಿಕ್ಕಿ ಉತ್ತಮ ಲಾಭ ಪಡೆಯುವ ಸಮಯದಲ್ಲಿ ರಾತ್ರೋರಾತ್ರಿ ತಮಿಳುನಾಡಿನಿಂದ ಬರುವ ಕಾಡಾನೆಗಳು ೧೦ ನಿಮಿಷದಲ್ಲಿ ರೈತರ ಮೂರು ತಿಂಗಳ ಬೆವರ ಹಾನಿಯಲ್ಲಿ ನಾಶಮಾಡಿ ಖಾಸಗಿ ಸಾಲಕ್ಕೆ ಸಿಲುಕಿ ರೈತರನ್ನು ಬೀದಿಗೆ ತಳ್ಳುತ್ತಿದ್ದರು ಸರ್ಕಾರ ಅರಣ್ಯ ಇಲಾಖೆ ಜನ ಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನೊಂದ ರೈತ ನಾಗರಾಜ ಹಾಗೂ ಸೀತಿ ಬೈರಪ್ಪ ಮಾತನಾಡಿ ಐದು ವರ್ಷಗಳಿಂದ ನಾಪತ್ತೆಯಾಗಿರುವ ಜನ ಪ್ರತಿನಿಧಿಗಳು ೬ ತಿಂಗಳಿಂದ ಕಾಲಕ್ಕೆ ಚಕ್ರವನ್ನು ಕಟ್ಟಿಕೊಂಡು ಹಳ್ಳಿಗಳಿಗೆ ರಾತ್ರಿ ಹಗಲು ಸುತ್ತಾಡಿ ನಿಮ್ಮ ಕೈಕಾಲಿಗೆ ಬೀಳುತ್ತೇವೆ. ನಿಮ್ಮ ಸಮಸ್ಯೆಗೆ ಸ್ಪಂಧಿಸುತ್ತೇವೆ. ಈ ಬಾರಿ ನಮ್ಮನ್ನು ಆಶೀರ್ವಾಧಿಸಿ ಎಂದು ಬೇಡಿಕೊಳ್ಳುವ ಜನ ಪ್ರತಿನಿದಿಗಳಿಗೆ ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ರೈತರ ಪ್ರಾಣ ಹಾಗೂ ಬೆಳೆ ನಾಶವಾಗುತ್ತಿದ್ದರೂ ಸ್ಪಂಧಿಸದ ಜನ ಪ್ರತಿನಿಧಿಗಳಿಗೆ ನೊಂದ ರೈತರಿಂದ ಯಾವ ಮುಖಾಮಾಡಿ ಮತ ಹಾಕಬೇಕು ಎಂದು ಪ್ರಶ್ನೆಮಾಡಿದರು.
ಕಾಡಾನೆಗಳಿಂದ ಬೆಳೆ ನಷ್ಟವಾಗಿದೆ ಎಂದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರೆ ನೆಪಮಾತ್ರಕ್ಕೆ ಬೆಳೆ ಪರಿಶೀಲನೆ ಮಾಡಿ ಪೋಟೋ ಹಿಡಿದುಕೊಂಡು ಸರ್ಕಾರಕ್ಕೆ ಕಳುಹಿಸುತ್ತೇವೆಂದು ಉಡಾಪೆ ಉತ್ತರ ನೀಡುವ ಜೊತೆಗೆ ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣ ಮಾಡಲು ಅಳವಡಿಸಿರುವ ಸೋಲಾರ್ ತಂತಿ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಹಾಳಾಗಿರುವ ಜೊತೆಗೆ ಬ್ಯಾಟರಿ ಇದ್ದರೆ ವೈರ್ ಇಲ್ಲ, ವೈರ್ ಇದ್ದರೆ ಅದನ್ನು ನಿರ್ವಹಣೆ ಮಾಡುವ ಕೆಲಸಗಾರರು ಇಲ್ಲದೆ ಅನಾಥವಾಗಿ ಬಿದ್ದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪಿಸಿದರು.
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡದೇ ಗಡಿಭಾಗದ ಹಳ್ಳಿಗಳಿಗೆ ಬರುವ ೧೦ ವರ್ಷ ಅಧಿಕಾರ ಅನುಭವಿಸಿರುವ ಸ್ಥಳೀಯ ಶಾಸಕರಿಗೆ ಹಾಗೂ ಎರಡು ಪಕ್ಷದ ಅಭ್ಯರ್ಥಿಗಳಿಗೆ ನೊಂದ ರೈತರಿಂದ ಖಂಡಿತವಾಗಲು ಆನೆ ಲದ್ದಿಯ ಮುಖಾಂತರ ಉತ್ತರ ಕೊಡುವ ನಿರ್ಧಾರ ಮಾಡುವ ಎಚ್ಚರಿಕೆಯನ್ನು ಜನ ಪ್ರತಿನಿಧಿಗಳಿಗೆ ನೀಡಿದರು.