ದೇವದುರ್ಗ,ಜೂ.೨೬-
ತಾಲೂಕಿನ ರೈತರ ಸಮಸ್ಯೆಗಳಿಗೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಥಿ ನಡೆಸಿ ಮಾತನಾಡಿದವರು ತಾಲೂಕ ವ್ಯಾಪ್ತಿಯ ನಾಲ್ಕು ಉಪಕಾಲುವೆಗಳ ದುರಾಸ್ತಿ ಕಾಮಗಾರಿ ಕೈಗೊಂಡು ಒಂದುವರೆ ವರ್ಷ ಕಳೆದರೂ ಇದೂವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇಗಾಗಲೇ ಕೆಲಭಾಗದಲ್ಲಿ ಕಳಪೆ ಕಾಮಗಾರಿ ನಿರ್ಮಿಸಲಾಗಿದೆ ಎಂದು ನೀರಾವರಿ ಇಲಾಕೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ದೂರಿದರು.
ದೇವದುರ್ಗ ತಾಲೂಕಿನಾಧ್ಯಂತಹ ಕಳಪೆ ಮಟ್ಟದ ಬೀಜಗಳು ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡುತ್ತ ರೈತರಿಗೆ ವಂಚಿಸಲಾಗುತ್ತಿದೆ ಇಗಾಗಲೇ ಗಬ್ಬೂರ ಗ್ರಾಮದ ಹನುಮನ ಟ್ರೆಡರ್ಸ್ ನಲ್ಲಿ ರೈತರಿಗೆ ಕಳಪೆ ಬೀಜ ಮಾರಾಟ ಮಾಡಿರುವ ದಾಖಲೆಗಳ ಸಹಿತ ದೂರು ಸಲ್ಲಿಸಿದರೂ ಕೃಷಿ ಇಲಾಖೆಯ ಅಧಿಕಾರಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ವಾರದೊಳಗೆ ಉಪ ಕಾಲುವೆಗಳ ಕಾಮಗಾರಿ ಪೂರ್ಣ ಗೊಳಿಸದಿದ್ದಾರೆ ಹಾಗೂ ನಕಲಿ ಬೀಜಗಳ ಮಾರಾಟದ ಹಾವಳಿ ತಡೆಯದಿದ್ದಾರೆ ತಹಶಿಲ್ದಾರರ ಕಚೇರಿ ಹಾಗೂ ನೀರಾವರಿ ಇಲಾಕೆಯ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಾ.ಅಧ್ಯಕ್ಷ ಹಾಜೀ ಮಸ್ತಾನ, ತಿಮ್ಮಣ್ಣನಾಯಕ, ಹುಸೇನ್ ಬಾಷ,ಶಾಂತಮೂರ್ತಿ ಇದ್ದರು.