
ಶಹಾಪೂರ:ಅ.13:ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದ್ದು ಸಕಾಲಕ್ಕೆ ಸರಿಯಾಗಿ ಮಳೆಬಾರದೆ ರೈತಾಪಿ ವರ್ಗ ಸಾಕಷ್ಟು ಸಂಕಷ್ಟದಲ್ಲಿಇದ್ದಾರೆ,ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ತೊಂದರೆಯನ್ನು ಅರಿತು ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಬೇಕಿದ್ದ ಸರ್ಕಾರ ರೈತ ವಿರೋಧಿನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾನ್ಯ ಮುಖ್ಯಮಂತ್ರಿಗಳು 195ತಾಲೂಕುಗಳನ್ನು ರಾಜ್ಯದಲ್ಲಿ ಬರಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಿ ತಿಂಗಳುಗಳೆ ಕಳೆದರು ಪರಿಹಾರ ವಿತರಣಾ ಕಾರ್ಯ ಇನ್ನು ಆಗಿಲ್ಲ ಕೃಷಿ ಸಚಿವರು ಕೂಡ ಜಿಲ್ಲೆಯ ವರದಿಯನ್ನು ತರಿಸಿ ಅಧಿಕಾರಿಗಳ ಸಭೆ ನಡೆಸಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲೆಯಲ್ಲಿ ರೈತರು ಬೆಳೆದ ಹತ್ತಿ ತೊಗರಿ ಮೆಣಸಿನಕಾಯಿ ಮುಂತಾದ ಮುಂಗಾರು ಬೆಳೆಗಳು ಕೈ ಕೊಟ್ಟಿದ್ದು ಇದರಿಂದ ಸಾಲದ ಸುಳಿಯಲ್ಲಿ ಕಂಗಾಲಾಗಿದ್ದಾರೆ.ಶೀಘ್ರವೇ ರಾಜ್ಯ ಸರ್ಕಾರ ರೈತರ ಹಿತಕಾಯಬೇಕೆಂದು ಆಗ್ರಹಿಸಿದ್ದಾರೆ.