ರೈತರ ಶೋಷಣೆ ತಡೆಗೆ ಕೃಷಿ ಕಾಯ್ದೆ ಜಾರಿ: ಕಟೀಲ್

ಬೆಂಗಳೂರು,ಡಿ.೨೪- ಕೃಷಿ ಉತ್ಪನ್ನ ಮಾರುಕಟ್ಟೆಗಳು ರಾಜಕೀಯ, ಭ್ರಷ್ಟಾಚಾರ, ಮಧ್ಯವರ್ತಿಗಳ ಕೇಂದ್ರವಾಗಿದ್ದು ಈ ಅನ್ಯಾಯವನ್ನು ತಡೆಯಲು ಕೃಷಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಮತ್ತು ಕಮಿಷನ್ ಶುಲ್ಕಗಳನ್ನು ವ್ಯಾಪಾರಿಗಳಿಗೆ ವಿಧಿಸಿಯೂ, ರೈತರ ನಿವ್ವಳ ಆದಾಯದಿಂದ ಮತ್ತೊಂದಿಷ್ಟು ಶುಲ್ಕವನ್ನು ರೈತರಿಂದ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಅವರು
ಕೆಲವು ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯ ನಿಬಂಧನೆಗಳು ರೈತರ ಹಿತಾಸಕ್ತಿಗೆ ಎಷ್ಟು ನಿರ್ಬಂಧಿತವಾಗಿದೆ ಎಂದು ತಿಳಿಸಿದ್ದಾರೆ
ಕೃಷಿ ಉತ್ಪನ್ನಗಳ ಮಾರಾಟವು ಮಾರುಕಟ್ಟೆಯ ಹೊರಗೆ ನಡೆದಾಗಲೂ ಮಾರುಕಟ್ಟೆ ಶುಲ್ಕವನ್ನು ವಿಧಿಸಲಾಗುತ್ತಿರುವುದು ರೈತರ ಅನ್ನಕ್ಕೆ ಕಲ್ಲು ಹಾಕಿದಂತೆಯೇ. ರೈತ ಕಾಯ್ದೆ ಇಂತಹ ಸುಲಿಗೆಗಳನ್ನು ನಿಷೇಧಿಸುತ್ತದೆ. ಎಂದು ಅವರು ತಿಳಿಸಿದ್ದಾರೆ.
ದೇಶದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿದ್ದು ಹೀಗಾಗಿ ಅವರ ಹಿತದೃಷ್ಟಿ ಗಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ದೇಶದ ವಿವಿಧ ರಾಜ್ಯಗಳ ರೈತರು ಸಹಿ ಮಾಡಿದ್ದಾರೆ ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಅವರು ತಿಳಿಸಿದ್ದಾರೆ