ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹುಣಸಗಿ ಸೆ.10: ಇತ್ತೀಚೇಗೆ ಸುರಿದ ಭಾರಿ ಮಳೆಯಿಂದಾಗಿ ಕಂಗಾಲಾಗಿರುವ ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ ಇರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಕ.ರಾ.ರೈ.ಸಂ. ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.
ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತರು ಬೆಳೆಯುತ್ತಿರುವ ಹತ್ತಿ, ಭತ್ತ, ಮೆಣಸಿನಕಾಯಿ ಇನ್ನಿತರ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿ ಹಾಳಾದುದ್ದರ ಕುರಿತು ಸರ್ವೆ ಸರಿಯಾಗಿಲ್ಲವೋ ಅಥವಾ ಸರ್ಕಾರವೇ ಹಣ ಬಿಡುಗಡೆಗೊಳಿಸುತ್ತಿಲ್ಲಾ ಎಂದು ಆರೋಪಿಸಿದರು.
ನಂತರ ನಾಗರತ್ನ ವಿ ಪಾಟೀಲ್ ರಾಜ್ಯ ಅಧ್ಯಕ್ಷರು ಮಹಿಳಾ ಘಟಕ ಕ.ರಾ.ರೈ.ಸಂ ಮಾತಾನಾಡಿ, ಸುಮಾರು ವರ್ಷಗಳಿಂದಲೂ ಅತಿವೃಷ್ಠಿಯಿಂದಾಗಿ ರೈತನ ಬದುಕು ನೆಮ್ಮದಿ ಇಲ್ಲದಂತಾಗಿದ್ದು ತಮಗೆಲ್ಲರಿಗೂ ತಿಳಿದ ಸಂಗತಿ. ಆದರೂ ಕೂಡಾ ಸರ್ಕಾರಗಳಿಂದ ಯಾವುದೇ ರೈತನ ಬೆಳೆ ಹಾಳಾದುದರ ಬಗ್ಗೆ ಹೊಲಗಳಿಗೆ ಹೋಗುವ ರಸ್ತೆಗಳು ಹಾಳಾದುದರ ಕುರಿತು. ಪಂಪ್ ಸೆಟ್‍ಗೆ ಬೇಕಾಗುವ ವಿದ್ಯುತ್‍ನ ಕಂಬಗಳು, ಟ್ರಾನ್ಸ್‍ಫಾರಂಗಳು, ಹಾಳಾಗಿ ಹೋದರು ಕೂಡಾ ಸರಿಯಾಗಿ ತನಿಖಿಸದೇ ರಾಜ್ಯ ಸರಕಾರದಿಂದ ಅಥವಾ ಜಿಲ್ಲಾಡಳಿತದಿಂದ ಸರಿಯಾದ ಪರಿಹಾರಗಳು ದೊರಕದೆ, ರೈತರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿ ಕೃಷಿ ಕಾಯಕವನ್ನು ಬಿಡುವಂತಹ ಪರಿಸ್ಥಿತಿ ಒದಗಿದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಸ್ಪಂಧಿಸದಿರುವುದು ಮತ್ತಷ್ಟು ದಿಗಿಲುಂಟಾಗಿದ್ದು ಜಿಲ್ಲೆಂiÀiಲ್ಲಿನ ಎಲ್ಲಾ ತಾಲೂಕುಗಳ ಪರಿಸ್ಥಿತಿಯು ಬೇರೆಯೇನಿಲ್ಲಾ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಯಾದಗಿರಿ ರವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಜಗದೀಶ ಚೌರ ಅವರಿಗೆ ಸಲ್ಲಿಸಲಾಯಿತು.
ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ದೊರಕಿಸಿಕೊಡುವುದು.ಹೊಲಗಳಿಗೆ ಹೋಗುವ ರಸ್ತೆಗಳನ್ನು ದುರಸ್ತಿಗೊಳಿಸುವುದು.ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರಂಗಳು ಹಾಗೂ ಹಳೆಯದಾದ ತಂತಿಗಳಿಂದ ನಡೆಯದಂತಾಗಿದೆ ಅವುಗಳನ್ನು ನವೀಕರಿಸುವುದು.ನದಿ ಪಾತ್ರದ ಹಳ್ಳಿಗಳಲ್ಲಿ ಮನೆಗಳನ್ನು ಸ್ಥಳಾಂತರ ಮಾಡುವುದು.ಹೆದ್ದಾರಿಗಳ ತಗ್ಗು ಗುಂಡಿಗಳನ್ನು ಮುಚ್ಚಿ ದುರಸ್ಥಿಗೊಳಿಸುವುದು.ಎಲ್ಲಾ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು ಅವುಗಳು ಕಾರ್ಯಾ ಇಲ್ಲದೆ ಕೆಟ್ಟು ಹಾಳಾಗಿವೆ. ಅವುಗಳನ್ನು ದುರಸ್ಥಿಗೊಳಿಸುವುದು.ಅತೀವೃಷ್ಠಿಯಿಂದಾಗಿ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕು.ಕೃಷಿ ಇಲಾಖೆಯ ಜಂಟಿ ನಿರ್ದೇಶಕರು. ಸರ್ಕಾರದಿಂದ ರೈತರಿಗೆ ಒದಗಿಸುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ರೈತರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ರೈತರ ಗಮನಕ್ಕೆ ಬಾರದಂತೆ ಕಾಟಾಚಾರಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಾರಣ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದು.ತಾಲೂಕಿನ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ರೈತರಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಇದ್ದಲ್ಲಿ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು.
ಹೀಗೆ ಇನ್ನು ಹಲವಾರು ರೈತರ ಸಮಸ್ಯಗಳನ್ನು ಪರಿಹರಿಸುವ ಕುರಿತಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ತಾವುಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ಸ್ಪಂಧಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರನ್ನು ಒದಗಿಸಬೇಕಾಗಿ ವಿನಂತಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ. ಶರಣು ವಿ ಮಂದರವಾಡ ಜಿಲ್ಲಾಧ್ಯಕ್ಷರು ಯಾದಗಿರಿ, ಮುದ್ದಣ್ಣ ಅಮ್ಮಾಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿದ್ದು ಮೇಟಿ ಜಿಲ್ಲಾ ಉಪಾಧ್ಯಕ್ಷ, ಶಂಕರ ಜಾಧವ ತಾಲೂಕು ಅಧ್ಯಕ್ಷರು ಕ.ರಾ.ರೈ.ಸಂ ಹುಣಸಗಿ, ರತ್ನಮ್ಮ ಆರ್ ಪೂಜಾರಿ ಮ.ಘ.ತಾ.ಅಧ್ಯಕ್ಷರು ಹುಣಸಗಿ, ದೇವಮ್ಮ ಪೂಜಾರಿ ಮ.ಘ.ತಾ.ಉಪಾಧ್ಯಕ್ಷರು, ಮಾಸಾಬಿ ಕಕ್ಕಲದೊಡ್ಡಿ ಮ.ಘ.ಸಂ.ಕಾರ್ಯದರ್ಶಿ, ಮುದಕಪ್ಪ ನೂಲಿನ ತಾ.ಗೌ.ಅಧ್ಯಕ್ಷರು, ನಾಗರೆಡ್ಡಿ ನಾವದಗಿ ತಾ.ಕಾರ್ಯದರ್ಶಿ, ಮಲ್ಲಣ್ಣ ಮೇಟಿ ತಾ.ಉಪಾಧ್ಯಕ್ಷರು, ಹಣಮಂತ್ರಾಯಗೌಡ ಹಳ್ಳಿ ಪ್ರಧಾ ಕಾರ್ಯದರ್ಶಿ, ಮೌನೇಶ ಪೂಜಾರಿ ಸಾಹೇಬಲಾಲ ಕಕ್ಕಲದೊಡ್ಡಿ, ಹಣಮಂತ್ರಾ ಕಾಮನಟಗಿ, ಭೀಮಣ್ಣ ಕಾಂಬಳಿ, ಬಸನಗೌಡ ಮೇಟಿ, ಮಹಿಬೂಬ ಚೌದ್ರಿ, ಹಯ್ಯಾಳಪ್ಪ ಪೂಜಾರಿ, ತಿಮ್ಮಯ್ಯ ಗುತ್ತೇದಾರ, ಸಂಗಣ್ಣ ಪೂಜಾರಿ, ಕಾಸೀಮಸಾಬ ಮಾಳನೂರು, ವಾಲು ನಾಯಕ ಕುಪ್ಪಿ ತಾಂಡಾ, ಮಲ್ಲಣ್ಣ ಶ್ರೀನಿವಾಸಪೂರ, ದೇವಪ್ಪ ಪೂಜಾರಿ ಶ್ರೀನಿವಾಸಪೂರ ಗ್ಯಾನಪ್ಪ ಹುಲಿಕೇರಿ ಸೇರಿದಂತೆ ರೈತ ಸಂಘದ ಎಲ್ಲಾ ಗ್ರಾಮ ಘಟಕದ ಸರ್ವ ಸದಸ್ಯರು ಇತರರು ಇದ್ದರು.