ರೈತರ ರಸಗೋಬ್ಬರದ ಮೇಲೆ ಸಬ್ಸಿಡಿ ಹೆಚ್ಚಳ :ಅಂಬಾರಾಯ ಅಷ್ಠಗಿ ಸ್ವಾಗತ

ಕಲಬುರಗಿ ಮೇ 21, ದೇಶದ ರೈತರ ಆರ್ಥಿಕ ಸಬಲಿಕರಣ ಹಾಗೂ ಕೃಷಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಡಿಎಪಿ ರಸಗೋಬ್ಬರಗಳ ಮೇಲಿನ ಸಬ್ಸಿಡಿಯನ್ನು ಶೇ.140 ರಷ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.ಕೃಷಿಕ ವರ್ಗಕ್ಕೆ ಈ ರಸಗೋಬ್ಬರಗಳ ಖರೀದಿಯಲ್ಲಿ ಅತಿ ಹೆಚ್ಚಿನ ರಿಯಾಯಿತಿ ಘೋಷಿಸಿರುವುದು ದೇಶದ ಅನ್ನದಾತರಿಗೆ ಮತ್ತು ದೇಶದ ಅತಿದೊಡ್ಡ ಕೃಷಿ ಕ್ಷೇತ್ರದ ವಲಯಕ್ಕೆ ಬಹುದೊಡ್ಡ ವರದಾನವಾಗಲಿದೆ.
ರಸಗೋಬ್ಬರಗಳ ಬೆಲೆ ಹೆಚ್ಚಾಗಿ 2,400 ರೂ.ಗಳಿಗೆ ತಲುಪಿತ್ತು. ಈಗ ಇದನ್ನು ಅರ್ಧ ಬೆಲೆಗೆ ಅಂದರೆ 1,200 ರೂ.ಗಳಿಗೆ ಖರೀದಿಸಬಹುದಾಗಿದೆ.ಇದರಿಂದ ದೇಶದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂತಹ ಮಹತ್ವದ ತೀರ್ಮಾನ ಕೈಗೊಂಡಿರುವ ಕೇಂದ್ರ ಸರ್ಕಾರದ ಕ್ರಮ ಕೃಷಿ ವಲಯದ ಅಭಿವೃದ್ಧಿಗೆ ಪೂರಕವಾಗಲಿದೆ.ಕೋರೊನಾ ಸಂಕಷ್ಟದ ಸಮಯದಲ್ಲಿ ಇದೊಂದು ಪ್ರಬುದ್ಧ ನಿರ್ಧಾರವಾಗಿದ್ದು, ಕೇಂದ್ರ ಸರ್ಕಾರದ ಈ ನಡೆ ಅಭಿನಂದನಾರ್ಹವಾಗಿದೆ ಎಂದು ಅಂಬಾರಾಯ ಅಷ್ಠಗಿ ಹರ್ಷ ವ್ಯಕ್ತಪಡಿಸಿದ್ದಾರೆ.