ರೈತರ ಮೇಲೆ ಸುಳ್ಳು ಕೇಸ್ ಹಾಕಿಸುವ ರಾಜಕಾರಣಿಗಳನ್ನು ತಿರಸ್ಕರಿಸಿ  -ಆರ್ ಹರೀಶ್


ಸಂಜೆವಾಣಿ ವಾರ್ತೆ
ಕುಕನೂರು, ಮಾ.25: ರೈತರ ಸಮಸ್ಯೆಗಳ ಬಗ್ಗೆ  ಚರ್ಚಿಸುವಾಗ ಜನಪ್ರತಿನಿಧಿಗಳು ದುರುದ್ದೇಶದಿಂದ ರೈತರ ಮೇಲೆ ಸುಳ್ಳು ಕೇಸು ಸಾಕುವ ಪರಿಪಾಠಕ್ಕೆ ಕೊನೆ ಯಾಗ ಬೇಕು ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್ ಹರೀಶ್ ಹೇಳಿದರು. ಕುಡಗುಂಟ್ಗ್ರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಬೃಹತ ಕೈಗಾರಿಕೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಲಬುರ್ಗಾ ತಾಲೂಕಿನಲ್ಲಿ ಬರಿ ಸುಳ್ಳು ರಾಜಕಾರಣಿಗಳ  ಹಾವಳಿಯಿಂದ ತಾಲೂಕು ಅಭಿವೃದ್ಧಿಯಿಂದ ವಂಚಿತವಾಗಿದೆ, ನನ್ನಗೆ ನನ್ನ ಅಭಿವೃದ್ಧಿ ಬೇಕಾಗಿಲ್ಲ ನಿಮ್ಮ (ಜನರ) ಅಭಿವೃದ್ಧಿಯಾಗಬೇಕು  ಮುಂದಿನ ದಿನಗಳಲ್ಲಿ ನನ್ನಗೆ ಅವಕಾಶ ನೀಡಿದ್ದೆ ನಿಜವಾದರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದು ಹೇಳಿದರು. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ತಾಲೂಕಿನಾದ್ಯಂತ ಸುಮಾರು ಒನ್ 143 ಹಳ್ಳಿಗಳಿಗೆ ತಲಾ ೧೦  ಸಾವಿರ ರೂಪಾಯಿ ಗಳಂತೆ ಖರ್ಚು ವಿತರಸಲಾಗುತ್ತದೆ, ಅಭಿವೃದ್ಧಿಯನ್ನು ಸಹಿಸದ ಕೆಲವರು ಅಡೆತಡೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕೆ ತಾವು ಹೆದರುವುದಿಲ್ಲ. ಕಾನೂನನ್ನು ನಾವು ಗೌರವಿಸುತ್ತೇವೆ ಆದರೆ, ಅಧಿಕಾರಿಗಳ ಮೂಲಕ ನಮ್ಮ ಕೆಲಸಕ್ಕೆ ಅಡೆತಡೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ರಾಜಕಾರಣಿ ಕ್ಕಿಂತ ನಮಗೆ ಜನರ ಅಭಿವೃದ್ಧಿ ಮುಖ್ಯ ಹೀಗಾಗಿ ಜೂನ್ 20 ರಿಂದ ರೈತರಿಗೆ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. ಜನರು ನಮ್ಮ ಪಕ್ಷಕ್ಕೆ ಸದಾ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರು, ಭರತ್ ಕಾಂಬ್ಳೆ, ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ, ರಾಮಣ್ಣ ಕುಲಕರ್ಣಿ, ನಾಗನಗೌಡ ಪಾಟೀಲ್, ಎಲ್ಲೇಶ್, ಅನೇಕ ಮುಖಂಡರು ವೇದಿಕೆಯಲ್ಲಿದ್ದರು. ಇದಕ್ಕೂ ಮುಂಚೆ ಕಾರ್ಯಕರ್ತರು ವಿವಿಧ ಹಳ್ಳಿಗಳ ಮೂಲಕ ಬೈಕ್ ರ್ಯಾಲಿ ನಡೆಸಿದರು.