ರೈತರ ಮುದ್ದತ ಠೇವಣಿ ಹಣ, ಬಡ್ಡಿ ನೀಡಲು ಆಗ್ರಹಿಸಿ ಪ್ರತಿಭಟನೆ

ಆಳಂದ:ಅ.28:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸರಸಂಬಾದಲ್ಲಿ ರೈತರು ಮುದ್ದತ್ತ ಠೇವಣಿ ಮಾಡಿರುತ್ತಾರೆ. ಆಢಳಿತ ಮಂಡಳಿಯವರು ಈ ಶಾಖೆಯಿಂದ ಆಳಂದದಲ್ಲಿ ಸಂಘದ ಹೆಸರಿನಲ್ಲಿ ರೈತರ ಒಟ್ಟು 51 ಲಕ್ಷ 50 ಸಾವಿರ ರೂಪಾಯಿ ಠೇವಣಿ ಮಾಡಿರುತ್ತಾರೆ. ಆದರೆ ಒಂದು ವರ್ಷದ ನಂತರ ಮರಳಿ ಕೊಡಲಾಗುವುದು ಎಂಬ ಒಪ್ಪಿಗೆ ಮೇರೆಗೆ 5 ವರ್ಷ ಗತಿಸಿದರೂ. ಪಿಎಫ್ ಮತ್ತು ಬಡ್ಡಿ ಕೊಡಲಾಗದ ಪ್ರಯುಕ್ತ ರೈತರು ರೊಚ್ಚಿಗೆ ಎದ್ದು ಪಟ್ಟಣದ ಡಿಸಿಸಿ ಬ್ಯಾಂಕ ಎದುರುಗಡೆ ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಡಿಸಿಸಿ ಬ್ಯಾಂಕ ಎದುರುಗಡೆ ಪ್ರತಿಭಟನೆ ನಡೆಸುವುದು ಅಲ್ಲದೇ ಶ್ರೀ ರಾಮ ಮಾರ್ಕೇಟ ದಿಂದ ತಹಶೀಲ ಕಚೇರಿಗೆ ಹೋಗುವ ಮುಖ್ಯ ರಸ್ತೆ ಮೇಲೆ ಕುಳಿತು ಮಧ್ಯಾಹ್ನ 2 ಗಂಟೆ ವರೆಗೆ ಪ್ರತಿಭಟನೆ ನಡೆಸಿದರು. ಇದ್ದರಿಂದ ಕಸ ತುಂಬಿ ಕೊಂಡುವ ಹೋಗುವ ಪುರಸಭೆ ಕಸದ ಗಾಡಿ ಸುಮಾರು 2 ತಾಸು ನಿಲ್ಲುವಂತೆ ಆಯಿತು ಮತ್ತು ಪಟ್ಟಣದ ಜನರು ತೊಂದರೆ ಅನುಭವಿಸುವಂತೆ ನಡೆಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಡೀತರಾವ ಜಿಡಗೆ, ತಾ.ಪಂ ಸದಸ್ಯ ಸಾತಲಿಂಗಪ್ಪ ಪಾಟೀಲ್, ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ, ಮುಖಂಡರಾದ ಆನಂದರಾಯ ಯಲಶಟ್ಟಿ, ರಮೇಶ ಕಲಶಟ್ಟಿ, ಮಹಾದೇವಪ್ಪ ಪಾಟೀಲ್ ಸಾವಳೇಶ್ವರ, ಶ್ರೀಕಾಂತ ಸಿನೂರಕರ, ಲಿಂಗಪ್ಪ ಕಲಶಟ್ಟಿ, ಬಸವರಾಜ ಮೇತ್ರೆ, ಸಿದ್ಧರಾಮ ಬಲಕೆ ಹಾಗೂ ಸರಸಂಬಾ ನಾಗಲೇಗಾಂವ, ಸಕ್ಕರಗಾ, ಸಾವಳೇಶ್ವರ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.