ರೈತರ ಮಧ್ಯೆ ಜಯವಂತರಾವ್ ಪತಂಗೆ ಹುಟ್ಟು ಹಬ್ಬ ಆಚರಣೆ

ರಾಯಚೂರು.ಆ.೦೪- ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ನಿರ್ದೇಶಕರು, ನಾಫೆಡ್ ರಾಷ್ಟ್ರೀಯ ನಿರ್ದೇಶಕರು ಮತ್ತು ಎನ್.ಹೆಚ್.ಎಫ್.ಆರ್.ಡಿ.ನವದೆಹಲಿಯ ನಿರ್ದೇಶಕರು ಹಾಗೂ ಸಹಕಾರಿ ಧುರೀಣರಾದ ಪತಂಗೆ ಜಯವಂತರಾವ್ ಅವರಿಗೆ ೭೪ ನೇ ವರ್ಷದ ಹುಟ್ಟು ಹಬ್ಬವನ್ನು ರೈತರ ಮಧ್ಯೆ ಆಚರಿಸಿ, ಶಾಲು ಹೋದಿಸಿ ಸನ್ಮಾನಿಸಿದರು.
ಎಪಿಎಂಸಿಯಲ್ಲಿರುವ ಆರ್.ಎ.ಪಿ.ಎಂ.ಪಿ.ಸಿ.ಎಸ್. ನಲ್ಲಿ ರೈತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಸ್ವಯಂ ಸ್ಪೂರ್ತಿಯಿಂದ ಅಧ್ಯಕ್ಷರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.