ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವ ಜಮೀರ್‍ಗೆ ಮನವಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ19: ರೈತರ ಸಾಲ ಮನ್ನ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರಿಗೆ ಬುಧವಾರ ರೈತರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಒಂದೆಡೆ ಬರಗಾಲ, ಮತ್ತೊಂದಡೆ, ರೈತರ ಪಂಪ್‍ಸೆಟ್‍ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಬೆಳೆಗಳು ಒಣಗಿ ಹೋಗಿದ್ದು, ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೇ ಸರ್ಕಾರ ರೈತರ ಬೇಡಿಕೆ ಈಡೇಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಜೆ.ಕಾರ್ತಿಕ್, ಜೆ.ನಾಗರಾಜ್, ಹೆಚ್.ಜಿ.ಮಲ್ಲಿಕಾರ್ಜುನ, ಕೆ.ಹನುಮಂತಪ್ಪ, ಎಲ್ ಎಸ್ ರುದ್ರಪ್ಪ, ಕೆ.ಹುಲಗಪ್ಪ, ಎ ಮಂಜು, ಅರ್ಜುನಪ್ಪ, ಮಂಜುನಾಥ ಸಂಕ್ಲಾಪುರ, ಬಸವರಾಜ್, ಮಲ್ಲಪ್ಪ, ಮಹಂತೇಶ್ ವೆಂಕಟಾಪುರ, ಸಿದ್ದೇಶ್, ಹುಲುಗಪ್ಪ ಅಮರಾವತಿ, ಬೋರಮ್ಮ, ನೇತ್ರ, ಬಾರಿಕರ ಅಂಬಮ್ಮ, ನರಗಲ್ಲಮ್ಮ, ಸಿದ್ದಮ್ಮ, ಯಂಕಮ್ಮ, ನೀಲಮ್ಮ ಇತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆ:
ರೈತರ ಪಂಪ್ ಸೆಟ್‍ಗಳಿಗೆ 7 ತಾಸು 3 ಪೇಸ್ ವಿದ್ಯುತ್ ಸರಬರಾಜು ಮಾಡಬೇಕು. ವಿಜಯನಗರ ಜಿಲ್ಲೆಯಲ್ಲಿ ಕೆಲವು ತಾಲೂಕುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಇದ್ದು, ಆ ಪ್ರದೇಶಗಳನ್ನು ಗುರುತಿಸಿ ಬೆಳಿಗ್ಗೆ 6 ಗಂಟೆಗೆ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು. 3 ಕೃಷಿ ಕಾಯ್ದೆ ವಾಪಸ್ಸು ಪಡೆಯಬೇಕು. ಕಬ್ಬಿನ ಬೆಳಗೆ 3500 ರೂ ಬೆಲೆ ನಿಗಧಿಪಡಿಸಬೇಕು. ಸರ್ಕಾರ ಮುಂಗಡ ರಾಜ್ಯಕ್ಕೆ ಐದು ಸಾವಿರ ಕೋಟಿ ಮತ್ತು ವಿಜಯನಗರ ಜಿಲ್ಲೆಗೆ 150 ಕೋಟಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು. ಪಾಪಿನಾಯಕನಹಳ್ಳಿ ಏತ ನೀರಾವರಿ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಕ್ರಮ ವಹಿಸಬೇಕು. ಕಮಲಾಪುರದ ಎಸ್‍ಕೇಪ್‍ಗೇಟ್ ಮೂಲಕ ಸಿಪೇಜ್ ಕಾಲುವೆ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಕೊಟ್ಟೂರು ಭಾಗದಲ್ಲಿ 1 ಲಕ್ಷ ಟನ್ ಸಾಮಥ್ರ್ಯದ ರೇಕ್‍ಪಾಯಿಂಟ್, ರಸಗೊಬ್ಬರ ಶೇಖರಣೆಯ ಗೋದಾಮು ನಿರ್ಮಿಸಬೇಕು. ಭತ್ತ ಖರೀದಿ ಕೇಂದ್ರ ತೆರೆಯುವುದು ಸೇರಿ ಇತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.