ರೈತರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ

ಹರಿಹರ.ಜ.8; ತಾಲ್ಲೂಕು ರೈತ ಸಂಘಟನೆ ಹಾಗೂ ಜನಪರ ಹೋರಾಟ ವೇದಿಕೆ  ಇವರ ಆಶ್ರಯದಲ್ಲಿ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು 
ದೇಶದ ಲಕ್ಷಾಂತರ ರೈತರು ತಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಗು ಗಡಿಯಲ್ಲಿ ಶಾಂತಿಯುತ ಹೋರಾಟ ಪ್ರತಿಭಟನೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಅವರ ಹೋರಾಟ ಬೆಂಬಲಿಸಿ ದೇಶಾದ್ಯಂತ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ ನಮ್ಮ ಹರಿಹರ  ತಾಲ್ಲೂಕಿನಿಂದ ರೈತ ಸಂಘಟನೆ ಹಾಗೂ ಜನಪರ ಹೋರಾಟ ವೇದಿಕೆಯಿಂದ ಧರಣಿ ಸತ್ಯಾಗ್ರಹವನ್ನು ಮಾಡಲಾಗುತ್ತದೆ ನೂತನ ಕೃಷಿ ಮಸೂದೆಗಳಿಂದ ಬಂಡವಾಳಶಾಹಿಗಳು  ಕಾರ್ಪೊರೇಟರ್ ಕಂಪೆನಿಗಳಿಗೆ ಅನುಕೂಲ ಆಗುತ್ತದೆ ಹೊರತು ರೈತರ ಕಲ್ಯಾಣಕ್ಕಾಗಿ ಆಗೋದಿಲ್ಲ ದೇಶದ ರೈತ ಸಮುದಾಯವೇ ಈ ಕಾಯ್ದೆಗಳನ್ನು ವಿರೋಧಿಸುತ್ತಿದ್ದರೂ ಕೇಂದ್ರ ಸರ್ಕಾರ ಹಠ ಮಾಡುತ್ತಿರುವುದು ಖಂಡನೀಯವಾಗಿದೆ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಅವೈಜ್ಞಾನಿಕ ಕಾಯ್ದೆಗಳನ್ನು ರೂಪಿಸುತ್ತಿದೆ ಕೃಷಿ ಕ್ಷೇತ್ರಕ್ಕೆ ಆರ್ಥಿಕ ಕ್ಷೇತ್ರದ ತಜ್ಞರು ಪರಿಣಿತರ ಸಲಹೆ ಎಚ್ಚರಿಕೆ ಪರಿಗಣಿಸುತ್ತಿಲ್ಲ ರೈತರು ಕಾರ್ಮಿಕರು ಮುಂತಾದ ಶ್ರಮಿಕ ವರ್ಗದವರಿಗೆ ಭದ್ರತೆ ಒದಗಿಸುತ್ತಿಲ್ಲ ರೈತರ ಆದಾಯ ದುಪ್ಪಟ್ಟು ಗೊಳಿಸುವುದಾಗಿ ಕೇಂದ್ರ ಸರ್ಕಾರ ಇದನ್ನು ಈಡೇರಿಸಲು ವೈಜ್ಞಾನಿಕ ತಳಹದಿಯ ಸೂಕ್ತ ಕಾಯ್ದೆ ನಿಯಮ ರೂಪಿಸುವಂತಿಲ್ಲ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು   ದೇಶದ ಬೆನ್ನೆಲಬು ದೇಶಕ್ಕೆ ಅನ್ನ ನೀಡುವ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಡೀ ದೇಶವೇ ರೈತರ ಪರವಾಗಿ ಹೋರಾಟಕ್ಕೆ ನಿಲ್ಲಬೇಕಾಗುತ್ತದೆ ಎಂದು  ಕಾರ್ಮಿಕ ಮುಖಂಡರುಗಳಾದ ಎಚ್ ಕೆ ರಾಮಚಂದ್ರಪ್ಪ ಕೊಟ್ರಪ್ಪ ಎಚ್ .ಸಾಹಿತಿ ಕಲೀಂಬಾಷಾ.ಮಾಜಿ ದೂಡಾ ಸದಸ್ಯ ಎಚ್ ನಿಜಗುಣ .ರಾಷ್ಟ್ರೀಯ ಕ್ರೀಡಾಪಟು ಜಿ ಶಂಕರ್ ಮೂರ್ತಿ .ಬಿ ಮಗದುಮ್. ಎಕ್ಕೆಗುಂದಿ ರುದ್ರಗೌಡ .ಹುಲಿಕಟ್ಟಿ ಚನ್ನಬಸಪ್ಪ ಜಿ ಪ್ರಭುಗೌಡ .ಚಂದ್ರಯ್ಯ ಗುತ್ತೂರು ಬಸಣ್ಣ .ಹರಿ ಜಾದುಗರ್ .ಎಚ್ ಮಲ್ಲೇಶ .ರಮೇಶ್ ಮನೆ .ದೊಗ್ಗಳ್ಳಿ ಮಹೇಶ್ .ಡಿ ಹನುಮಂತಪ್ಪ ಆಶ್ರಯ ಕಾಲೊನಿ . ಕರೀಮ್. ರಘು ಡಿ ಹಾಗೂ ತಾಲ್ಲೂಕು ರೈತ ಸಂಘಟನೆ ಜನಪರ ಹೋರಾಟ ವೇದಿಕೆಯ ಎಲ್ಲ ಪದಾಧಿಕಾರಿಗಳು ಪ್ರಗತಿಪರ ಚಿಂತಕರು ಧರಣಿ ಸತ್ಯಾಗ್ರಹದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು