ರೈತರ ಬೆಳೆ ಸಮೀಕ್ಷೆ – ಸರಕಾರ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ

ಸಿರವಾರ.ಜು.೨೨- ತಾಲೂಕಿನ ಮಲ್ಲಟ್ ಹೋಬಳಿಯ ೨೦೨೨- ೨೩ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ಆರಂಭವಾಗಿದ್ದು .ರೈತರು ತಮ್ಮ ಮೊಬೈಲ್ ಮೂಲಕ ಸ್ವಂತ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನ ಸಮೀಕ್ಷೆ ಮಾಡಲು ಸರಕಾರ ಆದೇಶಿಸಿದ್ದು. ಕುರುಕುಂದ ಗ್ರಾಮದ ದೇವರಾಜ್ ತಂದೆ ಶಿವರಾಯ ಸರ್ವೆ ನಂಬರ್ ೧೪೯ ರಲ್ಲಿ ಮುಂಗಾರು ಹಂಗಾಮ ಬೆಳೆ ಸಮೀಕ್ಷೆ ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಬ್ ಚಾಲನೆ ನೀಡಿ ರೈತರಿಗೆ ಯಾವುದೇ ಗೊಂದಲಗಳಿಗೆ ಅನುವು ಮಾಡಿಕೊಡದಂತೆ ಸ್ವಂತ ನೀವೇ ನಿಮ್ಮ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡಲು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ವರದಿಯನ್ನ ಪ್ಲೇ ಸ್ಟೋರ್ ನಲ್ಲಿ ಹೋಗಿ ರೈತರ ಬೆಳೆ ಸಮೀಕ್ಷೆ ಯಾಪ್ ಎಂದು ಡೌನ್ಲೋಡ್ ಮಾಡಿಕೊಂಡು. ರೈತರ ಹೆಸರು, ಮೊಬೈಲ್ ಸಂಖ್ಯೆ, ನಮೂದಿಸಿ ನಂತರ ಸಕ್ರಿಯಗೊಳಿಸಿ ತಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಓಟಿಪಿಯನ್ನು ದಾಖಲಿಸಿ ಬೆಳೆ ವಿವರ ಪಾಣಿ ಮತ್ತು ಮಾಲೀಕರ ವಿವರ ಮೊದಲಾದವುಗಳನ್ನು ಅಪ್ಲೋಡ್ ಮಾಡಿ ನಂತರ ಜಿಲ್ಲೆಯನ್ನ ಆಯ್ಕೆ ಮಾಡಿ ,ತಾಲೂಕು ಆಯ್ಕೆ , ಹೋಬಳಿ ಆಯ್ಕೆಮಾಡಿ, ಗ್ರಾಮ ಆಯ್ಕೆ ಮಾಡಿ, ಸರ್ವೇ ನಂಬರ್ ನಮೂದಿಸಿ ಇಸ ಇದ್ದರೆ. ಅದನ್ನು ಆಯ್ಕೆ ಮಾಡುವುದು.
ನಂತರ ಮಾಲೀಕರ ಹೆಸರನ್ನು ನಮೂದಿಸಿ ತಮ್ಮ ಜಮೀನಿನಲ್ಲಿ ಇರುವ ಬೆಳೆಯನ್ನ ಛಾಯಾಚಿತ್ರ ತೆಗೆದು ಅಪ್ಲೋಡ್ ಮಾಡಲು ಈ ಎಲ್ಲಾ ಕಾರ್ಯವಿಧಾನಗಳನ್ನ ಮಾಡುವಾಗ ರೈತರ ಸರ್ವೇ ನಂಬರಿನ ಗಡಿರೇಖೆ ಒಳಗಡೆ ಇದ್ದುಕೊಂಡು ಬೆಳೆ ಸಮೀಕ್ಷೆಯನ್ನು ಮಾಡಬೇಕು ಎಂದು ಖಾಲಿದ್ ರೈತರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಮಲ್ಲಟ್ ಹೋಬಳಿಯ ಸಹಾಯಕ ಕೃಷಿ ಅಧಿಕಾರಿ ಮಾರುತಿ, ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ಪ್ರವೀಣ್ ಕುಮಾರ್ ,ತಾಂತ್ರಿಕ ಸಹಾಯಕ ನಾಗರಾಜ್ ಕಂಬಾರ್ , ಯೇಸು ಮಿತ್ರಪ್ಪ ಸಿರವಾರ, ಅಂಬರೀಶ್, ಹಾಗೂ ದುರ್ಗೇಶ್ ನಾಯಕ್, ರೈತರ ದೇವರಾಜ್ ಕುರುಕುಂದ,ದುರ್ಗಪ್ಪ ಕುರುಕುಂದ, ತನಜ ಕುರಕುಂದ ,ರಮೇಶ್ ಗೋಲದಿನ್ನಿ, ಕುರುಕುಂದ ಪಿ. ಆರ್. ಮೌಲಾಲಿ ಇತರರು ಇದ್ದರು.