ರೈತರ ಬೆಳೆ ವಿಮೆಯಲ್ಲಿ ಅಕ್ರಮ, ೨ ಕೋಟಿ ಹಣ ದುರುಪಯೋಗ

ಸಂಜೆವಾಣಿ ವಾರ್ತೆ
ಮಾನ್ವಿ,ಫೆ.೧೨- ತಾಲೂಕಿನ ಬೋಗವತಿ ಗ್ರಾಮದ ಸುತ್ತಮುತ್ತಲಿನ ಶೇಕಡಾ ೯೦% ರೈತರ ಬೆಳೆ ವಿಮೆಯ ಅದೇ ಗ್ರಾಮದ ಪ್ರಭಾವಿ ರಾಜಕಾರಣಿ ಪೋಲಿಸ್ ಪಾಟೀಲ್ ಕುಟುಂಬ ಹಾಗೂ ಸಂಬಂಧಿಕರು ಸೇರಿದಂತೆ ೧೪ ಜನರು ಕೃಷಿ ಅಧಿಕಾರಿ ಹಾಗೂ ಬೆಳೆ ವಿಮೆ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಒಟ್ಟು ೨-೩ ಕೋಟಿಗೂ ಬಡವರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಯುವ ರೈತ ಮುಖಂಡ ಶಿವಾರ್ಜುನ ಅಮರೇಶ್ವರ ಕ್ಯಾಂಪ್ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಬೋಗವತಿ ಗ್ರಾಮದ ೨೧೮ ರೈತರ ವಿಮಾ ಹಣವನ್ನು ದುರುಪಯೋಗಕ್ಕೆ ಅಧಿಕಾರಿಗಳಾದ ಜಿಲ್ಲಾ ಎ ಡಿ,ಜೆ ಡಿ, ದೂರು ೮ ತಿಂಗಳಾದರೂ ಕ್ರಮವನ್ನು ಕೈಗೊಳ್ಳದೆ ಅಧಿಕಾರಿ ದೇವಿಕಾ ಅವರು ಹೇಳಿಕೆ ರೈತರು ಗೌಡರಿಗೆ ಲೀಜ್ ಕೊಟ್ಟಿರಬಹುದು ಎಂದು ಬೇಜವ್ದಾರಿಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಕೃಷಿ ಅಧಿಕಾರಿ ಹುಸೇನಿ ಸಾಹೇಬ್ ಕೃಷಿ ಇಲಾಖೆಯ ಹಣವನ್ನೇ ದುರ್ಬಳಕೆ ಮಾಡಿಕೊಂಡಿದ್ದು ಇದಕ್ಕೆ ಬೆಳೆ ವಿಮೆ ಅಧಿಕಾರಿ
ಶಂಕರಗೌಡ ಇವರನ್ನು ಕೂಡಲೇ ಬಂಧಿಸಿದರೆ ಮಾತ್ರ ನೈಜ ಸತ್ಯ ಹೊರಗಡೆ ತೆಗೆಯಬಹುದು.
ನಂತರ ಹನುಮೇಶ ನಾಯಕ ಸಾದಾಪೂರು ಅಖಿಲ ಕರ್ನಾಟಕ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಮಾತಾನಾಡಿದ ಬೋಗವತಿ ಗ್ರಾಮದಲ್ಲಿ ಕನಿಷ್ಠ ೨೦೦ ಜನ ರೈತರಿಗೆ ಬಾರಿ ಅನ್ಯಾಯವಾಗಿದೆ ಇಂತಹ ಬಡವರ ಹಣವಾಗಿರುವ ಫಸಲು ಭೀಮಾ ಯೋಜನೆಯ ಹಣವನ್ನು ವಾರದೊಳಗೆ ವಾಪಸ್ಸು ನೀಡದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ರೂಪಿಸಲಾಗುತ್ತದೆ ರಾಜಕೀಯದಲ್ಲಿ ದೊಡ್ಡವರು ಎನ್ನಿಸಿಕೊಂಡ ನೀವುವಳೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು .
ಈಗಾಗಲೇ ಈ ವಿಷಯವನ್ನು ಬಹಿರಂಗ ಮಾಡಿದ ಕಾರಣದಿಂದಾಗಿ ಬೆದರಿಕೆ ಕರೆಗಳು ಬಂದಿದ್ದು ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಇದಕ್ಕೆ ಬೋಗವತಿ ಪೋಲಿಸ ಪಾಟೀಲ ಕುಟುಂಬವೇ ಹಾಗೂ ಇದಕ್ಕೆ ಸಹಾಕಾರ ಮಾಡಿದ ಕೃಷಿ ಅಧಿಕಾರಿಗಳ , ವಿಮೆ ಅಧಿಕಾರಿ, ರಾಜಕಾರಣಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತರಾದ ವಿಜಯನಾಯಕ, ಹುಚ್ಚುಬುಡ್ಡಪ್ಪ, ಉಮಾಪತಿ, ಅಯ್ಯಾಳಪ್ಪ, ಈಶಪ್ಪ ಸ್ವಾಮಿ, ಹನುಮೇಶ, ಹನುಮಂತ ರಡ್ಡಿ, ಶೇಖರಪ್ಪ, ಜಿ ಹನುಮೇಶ, ಸೇರಿದಂತೆ ಅನೇಕರು ಇದ್ದರು.