ರೈತರ ಬೆಳೆ ಪರಿಹಾರ ಲಕ್ಷಾಂತರ ಹಣ ದುರುಪಯೋಗ; ರೈತರ ಆರೋಪ

ಕಲಬುರಗಿ:ಆ.29: ಕಮಲಾಪುರ ತಾಲೂಕಿನ ಸೊಂತ ಮತ್ತು ಚೇಗಂಟಾ ಸೇರಿ ಸುತ್ತಲಿನ ಹಳಿಗಳಲ್ಲಿ ಗ್ರಾಮ ಲೆಕ್ಕಿಗರು ಮತ್ತು ಇಂಟರ್‍ನೆಟ್ ಸೇವಾ ಕೇಂದ್ರದವರಿಗೆ ಲಾಗಿನ್ ನೀಡಿದ್ದರಿಂದ ಮನಬಂದಂತೆ ರೈತರ ಹಣ ಖಾತೆಗೆ ಸೇರದೆ ಪೆÇೀಲಾಗಿದೆ ಎಂದು ರೈತರು ದೂರಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, 2022-23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪರಿಹಾರ ರೈತರ ಖಾತೆಗೆ ಬರಬೇಕಾಗಿದ್ದ ಹಣವನ್ನು ಖಾಸಗಿ ಇಂಟ ನೆಟ್ ಮೂಲಕ ತಮಗೆ ಬೇಕಾದವರ ಖಾತೆಗೆ ರೈತರ ಹೆಸರುಳ್ಳವರಿಗೆ ಹಾಕಿ ಹಣ ಎತ್ತಿ ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕು ರಿತು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿ ಸುವಂತೆ ರೈತರು ಆಗ್ರಹಿಸಿದ್ದಾರೆ.

ಸೊಂತ ಗ್ರಾಮದ ಲೆಕ್ಕಿಗರು ಹೆಸರು ರಾಜು ಚವ್ಹಾಣ ಅವರು ಗ್ರಾಮ ಪಂಚಾಯತಿಯ ಸದಸ್ಯರಾದ ಸತೀಶ ತಂದೆ ಗಣಪತಿ ರಾಠೋಡ ಇವರಿಗೆ ಲಾಗಿನ ನೀಡಿ ರೈತರ ಹೆಸರಿನಲ್ಲಿರುವ ಖಾತೆಯ ಹಣ ತಮ್ಮ ಕುಟುಂಬ ಸಂಬಂಧಿಕರ ಹಾಗೂ ತಮ್ಮಗೆ ಬೇಕಾಗಿರುವ ಖಾತೆಗೆ ಸುಮಾರು 300ಕ್ಕಿಂತ ಹೆಚ್ಚು ರೈತರ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಅಂದಾಜು ಮೊತ್ತ 1ಕೋಟಿ ಹಣಕ್ಕಿಂತ ಹೆಚ್ಚಾಗಿದ್ದು ಈ ಸಮಸ್ಯೆಯಿಂದ ರೈತರಿಗೆ ಬಹಳಷ್ಟು ತೊಂದರೆ ಆಗಿದ್ದು ಅವರು ಆತ್ಮಹತ್ತೇ ಮೋರೆಗೆ ಶರಣಾಗುವ ಪರಿಸ್ತಿತಿ ಉಂಟಾಗಿದೆ. ಈ ಅವ್ಯವಹಾರವು ಸುಮಾರು ಗ್ರಾಮಗಳು ಹಾಗೂ ತಾಂಡಾಗಳಲ್ಲಿ ನಡೆದಿದೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯ ಸದಸ್ಯರ ಮೇಲೆ ಕ್ರಮ ಜರೂಗಿಸಬೆಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಎಚ್ ಪಾಟೀಲ, ಕುಪೇಂದ್ರ ಎಸ್ ಮಲ್ಲಿ, ವಿಠ್ಠಲ ಡಿ ರಾಠೋಡ, ವಿಠ್ಠಲ ಮಾಸ್ಟರ್, ನವರಂಗ ಜಾಧವ, ಸಂಜೀವ ರಾಠೋಡ, ಬಾಬು ಚವ್ಹಾಣ, ಬಳಿರಾಮ ರಾಠೋಡ, ತಾರಾಸಿಂಗ, ನಾರಾಯಣ ರಾಠೋಡ, ಉದಯ ಕುಮಾರ ಪಾಟೀಲ್, ಧರ್ಮಣ್ಣ ರವೀಂದ್ರ ರಾಠೋಡ, ಅರುಣ ರಾಠೋಡ, ವೆಂಕಟೇಶ ರಾಠೋಡ, ವೀರೇಶ ಜಮಾದಾರ, ಈಶ್ವರ ಜಾಧವ, ಚಂದು ಚವ್ಹಾಣ, ಅರ್ಜುನ ವಾಲಿ, ಸುಭಾಷ್ ರಾಠೋಡ, ಮೋಹನ್ ರಾಠೋಡ ಸೇರಿದಂತೆ ಇನ್ನಿತರರು ಹಾಜರಿದ್ದರು.