ರೈತರ ಬೆಳೆ ನಷ್ಟಕ್ಕೆ ಬೆಳೆ ವಿಮೆ

ಕೋಲಾರ, ಜು. ೩೦: ಇತ್ತೀಚಿನ ದಿನಗಳಲ್ಲಿ ಅತಿ ವೃಷ್ಠಿಯಿಂದಾಗಿ ವಿವಿಧ ಬೆಳೆಗಳು ನಾಶವಾಗಿರುತ್ತದೆ. ಆದ್ದರಿಂದ ರೈತರು ತಮ್ಮ ಬೆಳೆಯನ್ನು ಮೊಬೈಲ್ ಆ?ಯಪ್‌ನಲ್ಲಿ ನಮೂದಿಸಿಕೊಂಡರೆ ರೈತರ ಬೆಳೆ ನಷ್ಟಕ್ಕೆ ಬೆಳೆ ವಿಮೆ ಒದಗಿಸಿಕೊಡಲಾಗುವುದು ಎಂದು ಜಿಲ್ಲಾ ಸಾಂಖ್ಯಿಕ ಸಂಗ್ರಹಣ ಕಛೇರಿಯ ಸಹಾಯಕ ನಿರ್ದೇಶಕರಾದ ರವಿ.ಎಂ ಅವರು ತಿಳಿಸಿದರು.
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜನನ-ಮರಣ ನೊಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶದ ನಿರ್ವಹಣೆ ೨೦೨೨-೨೩ನೇ ಸಾಲಿನ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಕುರಿತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ನಮ್ಮ ತಾಲ್ಲೂಕಿನಲ್ಲಿ ಬೆಳೆ ಕಟಾವು ಪ್ರಯೋಗ ಯಾವುದೇ ತೊಂದರೆಗಳಿಲ್ಲದೆ ಸುಗಮವಾಗಿ ನಡೆದಿದೆ. ಅದೇ ರೀತಿ ಈ ವರ್ಷವು ಸಹ ಬೆಳೆ ಕಟಾವು ಪ್ರಯೋಗಗಳು ಮುಕ್ತಯವಾಗಿದೆ. ಯಾವುದೇ ಮೊಬೈಲ್ ಆಪ್‌ನಲ್ಲಿ ಪ್ರಯೋಗವನ್ನು ಮಾಡುವಾಗ ಯಾವುದೇ ತೊಂದರೆ ಉಂಟಾದಲ್ಲಿ ನಮ್ಮ ಗಮನಕ್ಕೆ ತರಬೇಕು. ಆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅಧಿಕಾರಿಗಳಿಗೆ ಹೇಳಿದರು. ಬೆಳೆ ನಷ್ಟವನ್ನು ಅಂದಾಜಿಸಿ ಬೆಳೆ ವಿಮೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ರಮೇಶ್ ಅವರು ಮಾನತಾಡಿ, ೨೦೨೨-೨೩ನೇ ಸಾಲಿನ ಬೆಳೆ ಕಟಾವು ಪ್ರಯೋಗಗಳ ಬಗ್ಗೆ ಸವಿಸ್ತಾರವಾಗಿ ತರಬೇತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾ ಕಛೇರಿಯ ಸಾಂಖ್ಯಿಕ ಅಧಿಕಾರಿಗಳಾದ ಮುನಿಯಪ್ಪ, ವೆಂಕಟರವಣ.ಎನ್, ನಿರೀಕ್ಷಕರಾದ ಕೃಷ್ಣಮೂರ್ತಿ.ಎನ್, ಮಹ್ಮದ್ ಇಷಾಕ್ ಸೇರಿದಂತೆ ಉಪಸ್ಥಿತರಿದ್ದರು.