ರೈತರ ಬೀಜ, ಗೊಬ್ಬರ ಸರಬರಾಜು ಮಾಡುವ ವಿತರಣಾ ಕೇಂದ್ರ ಹೆಚ್ಚಿಸಿ

ಬೀದರ: ಜೂ.6:ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಜಮಿನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹಲವು ಬೀಜ ವಿತರಣೆ ಕೇಂದ್ರದಲ್ಲಿ ಬೀಜ ಹಾಗೂ ಗೊಬ್ಬರ ಖರೀದಿಸಲು ಸಾಲು ಸಾಲು ನಿಲ್ಲುತ್ತಿದ್ದಾರೆ ಕೊರೊನ ಸೊಂಕಿನಿಂದ ಜನರು ಗುಂಪು ಗುಂಪಾಗಿ ಸೇರಬಾರದು ಎಂದರೆ ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಸ್ಥಾಪಿಸುವುದು ಸೂಕ್ತ ಕ್ರಮ ಎಂದು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ತಿಳಿಸಿದ್ದಾರೆ.

ಬೀದರ ದಕ್ಷಿಣ ಕ್ಷೇತ್ರದಲ್ಲಿ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಈಗಾಗಲೇ ರೈತರು ಕೊರೊನ ಸೊಂಕಿನಿಂದ ಜಮಿನಿನಲ್ಲಿ ಬೆಳೆದ ತರಕಾರಿ, ಕಲ್ಲಗಂಡಿಗೆ ಸರಿಯಾಗಿ ದರ ಸಿಗದೆ ನಷ್ಟಕ್ಕೆ ಒಳಗಾಗಿದ್ದಾರೆ ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಉತ್ತಮವಾದರೆ ರೈತರಿಗೆ ನೆರವಾಗುತ್ತದೆ ಎಂದಿದ್ದಾರೆ.

ರೈತರು ಆತಂಕ ಪಡಬೇಕಾಗಿಲ್ಲ ಸೊಯಾಬೀನ್ ಬೀಜ ಪ್ರತಿಯೊಬ್ಬರಿಗೆ ದೊರುಕುತ್ತದೆ. ಸರದಿ ಸಾಲಿನಲ್ಲಿ ನಿಂತು ಸಮಾಜಿಕ ಅಂತರ ಕಾಯ್ದುಕೊಂಡು ಸರಕಾರ ನಿಯಮ ಪಾಲಿಸಿ ಕೊರೊನ ಓಡಿಸಲು ಸಹಕರಿಸಿ. ಜಿಲ್ಲೆಯಲ್ಲಿ ಕೊರೊನೊ ಕೇವಲ 1% ಇದೆ ರಾಜ್ಯದಲ್ಲಿ ಪಾಜಿಟಿವ್ ಕಮ್ಮಿ ಇರುವ ಜಿಲ್ಲೆ ಬೀದರ ಇದು ಸಂತಸ ತಂದಿದೆ. ಆದರೆ ಜಿಲ್ಲೆಯಲ್ಲಿ ಸೊಂಕು ಕಡಿಮೆ ಎಂದು ನಿರ್ಲಕ್ಷ್ಯ ಬೇಡ, ಜಾಗೃತಿ ಅತ್ಯಂತ ಅವಶ್ಯಕ. ಕೊರೊನಾ ಸಂಪೂರ್ಣವಾಗಿ ಕಡಿಮೆಯಾಗಿ ಲಾಕ್ ಡೌನ್ ಮುಕ್ತಾಯವಾಗಬೇಕಾದರೆ ಜೂನ್ 14 ವರೆಗೆ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡಾನ್ ನಿಯಮ ಪಾಲಿಸಿ ದಯವಿಟ್ಟು ಮಾಸ್ಕ ಧರಿಸಿ ಎಂದು ಪ್ರಕಟಣೆ ಮೂಲಕ ಖೇಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.