ರೈತರ ಪ್ರತಿಭಟನೆ 30 ನೇ ದಿನಕ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.21: ರೈತರ ಸಾಲ ವಸೂಲಾತಿ ಬಗ್ಗೆ ವಿರೋಧಿಸಿ ಕರ್ನಾಟಕ ಗ್ರಾಮಿಣ ಬ್ಯಾಂಕ್ ನ ನಗರದಲ್ಲಿರುವ ಪ್ರಧಾನ ಕಚೇರಿ ಮುಂದೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಇಂದು 30 ನೇ ದಿನಕ್ಕೆ ಕಾಲಿರಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಮತ್ತು ಸಂಗನಕಲ್ಲು ಗ್ರಾಮದ ರೈತರು ಇಂದು ಈ  ಧರಣಿ ಸತ್ಯಾಗ್ರಹ ಪಾಲ್ಗೊಂಡಿದ್ದರು.
ಸಂಘದ  ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕ್ರಿಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕಮ್ಮರಚೇಡು ಈಶ್ವರಪ್ಪ ಮತ್ತು ಖಜಾಂಚಿ ಆಂದ್ರಾಳ್ ಕೆ.ಮಾರೆಣ್ಣ ಮತ್ತು ರೈತ ಮುಖಂಡರು ಭಾಗವಹಿಸಿದ್ದರು