
ದಾವಣಗೆರೆ. ಏ.೧೭; ರೈತರ ಚುನಾವಣಾ ಪ್ರಣಾಳಿಕೆಗೆ ಒಪ್ಪಿಗೆ ನೀಡುವ ಪಕ್ಷಕ್ಕೆ ರೈತರು ಬೆಂಬಲ ನೀಡಲಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦ ಅಂಶಗಳ ಪ್ರಣಾಳಿಕೆಯನ್ನು ರೈತ ಸಂಘಟನೆಗಳು ಬಿಡುಗಡೆ ಮಾಡಿವೆ ಈ ಪ್ರಣಾಳಿಕೆಯಂತೆ ರೈತರಿಗೆ ನೆರವು ನೀಡುವ ಪಕ್ಷಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ.ಆದರೆ ಇಲ್ಲಿಯವರೆಗೆ ಯಾವ ಪಕ್ಷಗಳು ಮುಂದೆ ಬಂದಿಲ್ಲ ಆದ ಕಾರಣ ಏ.೨೦ ಕ್ಕೆ ಧಾರವಾಡದ ರಂಗಾಯಣದಲ್ಲಿ ಬೆಳಗ್ಗೆ ೧೧ ಕ್ಕೆ ಪದಾಧಿಕಾರಿಗಳ ಜಾಗತಿಕ ಸಮಾವೇಶ ಮಾಡಲಾಗುತ್ತಿದೆ.ಸ್ವಾತಂತ್ರ್ಯ ನಂತರ ಎಲ್ಲಾ ಚುನಾವಣೆಗಳಲ್ಲಿ ರೈತರನ್ನು ವಂಚನೆ ಮಾಡಲಾಗಿದೆ.ರೈತರ ಬದುಕು ಹಸನಾಗಿಲ್ಲ.ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ ಆದರೆ ರೈತರಿಗೆ ನೆರವು ನೀಡುತ್ತಿಲ್ಲ ಈ ಬಗ್ಗೆ ಏ.೨೦ ರಂದು ಚರ್ಚೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಹೆಚ್. ದೇವಕುಮಾರ್, ಹತ್ತಳ್ಳಿ ದೇವರಾಜ್, ಅಂಜಿನಪ್ಪ, ಪೂಜಾರ್, ಮುರಿಗೇಂದ್ರಯ್ಯ ಉಪಸ್ಥಿತರಿದ್ದರು.